ಕರಾವಳಿ

`ಬಣ್ಣ ಬಣ್ಣದ ಬದುಕು’ ಕನ್ನಡ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ

Pinterest LinkedIn Tumblr

banna_baduku_cd_1

ಮಂಗಳೂರು: ಮುತ್ತುರಾಮ್ ಕ್ರಿಯೇಷನ್ಸ್ ಕಾರ್ಕಳ ಲಾಂಛನದಲ್ಲಿ ತಯಾರಾದ ಕೃಷ್ಣ ನಾಯ್ಕ್ ಕಾರ್ಕಳ ನಿರ್ಮಾಣ ಹಾಗೂ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ `ಬಣ್ಣ ಬಣ್ಣದ ಬದುಕು’ ಕನ್ನಡ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಬುಧವಾರ ನಗರದ ಪುರಭವನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕುಡಿಯುವ ನೀರು ಒದಗಿಸಿ ಕೊಡುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಆದರೆ ಕೊಡುವಾಗ ನಮ್ಮಲ್ಲಿ ಇದೆಯಾ ಎನ್ನುವುದನ್ನು ನೋಡಬೇಕು. ಕಾವೇರಿ ವಿಷಯದಲ್ಲಿ ಎದುರಾದ ಪ್ರಶ್ನೆ ನಮ್ಮ ನೇತ್ರಾವತಿ ನದಿಗೂ ಅನ್ವಯಿಸಬೇಕು. ನಮಗೆ ನೀರಿಲ್ಲದ ಪರಿಸ್ಥಿತಿ ಸೃಷ್ಟಿಸುವ ಎತ್ತಿನಹೊಳೆ ಯೋಜನೆ ಕುರಿತು ಜನತೆ ಎಚ್ಚೆತ್ತು ಕೊಳ್ಳುವ ದಿನಗಳು ಎದುರಾಗಿವೆ ಎಂದು ಅವರಿ ಈ ಸಂದರ್ಭ ಹೇಳಿದರು.

banna_baduku_cd_2 banna_baduku_cd_3 banna_baduku_cd_4 banna_baduku_cd_5 banna_baduku_cd_6 banna_baduku_cd_7 banna_baduku_cd_8 banna_baduku_cd_9 banna_baduku_cd_10 banna_baduku_cd_11 banna_baduku_cd_12

ಜಿ.ಆರ್.ಎಜ್ಯುಕೇಶನ್ ಹಾಗೂ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಸಮಾರಂಭವನ್ನು ಉದ್ಘಾಟಿಸಿ, ಚಿತ್ರಕ್ಕೆ ಶುಭಾಕೋರಿದರು.

ಲಹರಿ ಆಡಿಯೋ ಸಂಸ್ಥೆ ಮುಖ್ಯಸ್ಥ ಲಹರಿವೇಲು, ಚಿತ್ರನಟರಾದ ಶ್ರೀನಗರ ಕಿಟ್ಟಿ, ನಾಗೇಂದ್ರ ಅರಸು, ಶಾಸಕ ಮೊಯ್ದಿನ್ ಬಾವ, ಮೇಯರ್ ಎಂ ಹರಿನಾಥ್, ಮನಪಾ ಮುಖ್ಯ ಸಚೇತಕ ಎಂ ಶಶಿಧರ ಹೆಗ್ಡೆ, ತುಳು ನಾಟಕ ನಿರ್ದೇಶಕ ಹಾಗೂ ತುಳು ಚಿತ್ರ ನಿರ್ಮಾಪಕ, ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ತುಳು ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಸುದೇಶ್ ಕುಮಾರ್, ಸಮಾಜ ಸೇವಕ ಯಜ್ಞೇಶ್ವರ ಬರ್ಕೆ, ಪ್ರಮುಖರಾದ ಬಲಿಪ ನಾರಾಯಣ ಭಾಗವತರು, ಪಟ್ಲ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಮುಂಬಯಿ, ದಿವಾಕರ ಪಾಂಡೇಶ್ವರ, ನಟರಾದ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿದ್ದರು.

banna_baduku_cd_13 banna_baduku_cd_14 banna_baduku_cd_15 banna_baduku_cd_16 banna_baduku_cd_17 banna_baduku_cd_18 banna_baduku_cd_19 banna_baduku_cd_20 banna_baduku_cd_21 banna_baduku_cd_22 banna_baduku_cd_23 banna_baduku_cd_24 banna_baduku_cd_25 banna_baduku_cd_26 banna_baduku_cd_27 banna_baduku_cd_28 banna_baduku_cd_29 banna_baduku_cd_30

`ಬಣ್ಣ ಬಣ್ಣದ ಬದುಕು’ ಚಿತ್ರದ ನಾಯಕ ನಟ ರವಿರಾಜ್ ಶೆಟ್ಟಿ, ನಟಿಯರಾದ ರಿಯಾ ಮೇಘನ, ಅನ್ವಿತ ಸಾಗರ್, ನೃತ್ಯ ನಿರ್ದೇಶಕಿ ಅನುಷಾ ಹೆಗ್ಡೆ ಹಾಗೂ ಚಿತ್ರತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.

`ಬಣ್ಣ ಬಣ್ಣದ ಬದುಕು’ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಸ್ವಾಗತಿಸಿದರು. ಚಿತ್ರದ ನಿರ್ಮಾಪಕ ಕೃಷ್ಣನಾಯ್ಕ್ ಕಾರ್ಕಳ ವಂದನಾರ್ಪಣೆಗೈದರು.

Comments are closed.