ಕರಾವಳಿ

ಎತ್ತಿನಹೊಳೆ ಯೋಜನೆ ಹೆಸರಲ್ಲಿ ಜಿಲ್ಲೆಯ ಜನರಿಗೆ ಪಂಗನಾಮ : ಸರ್ವಕಾಲೇಜು ವಿದ್ಯಾರ್ಥಿ ಸಂಘ ಆರೋಪ

Pinterest LinkedIn Tumblr

yettinahl_stdent_protst_1

ಮಂಗಳೂರು, ಅ.6: ಸರ್ವಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಗುರುವಾರ ನಗರದ ಬೆಸೆಂಟ್ ವೃತ್ತದಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟವು ಹಿಂಸೆಗೆ ತಿರುಗುವ ಮೊದಲು ರಾಜ್ಯ ಸರಕಾರ ಎಚ್ಚೆತ್ತುಕೊಂಡು ಯೋಜನೆಯನ್ನು ಕೈಬಿಡಬೇಕು ಎಂದು ಕೇಮಾರು ಸಾಂದೀಪನಿ ಮಠದ ಈಶ ವಿಠಲ ದಾಸ ಸ್ವಾಮೀಜಿ ಆಗ್ರಹಿಸಿದರು.

yettinahl_stdent_protst_2 yettinahl_stdent_protst_3 yettinahl_stdent_protst_4

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನ ಹೊಳೆಯ ಯೋಜನೆಗೆ ಸಂಬಂಧಿಸಿ ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳನ್ನು ಕಡೆಗಣಿಸಿದೆ. ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ 15 ದಿನಗಳಲ್ಲಿ ಸಿಎಂ ಜತೆಗೆ ಮಾತನಾಡುತ್ತೇನೆ ಎಂದು ಹೇಳಿ ಮೂರು ತಿಂಗಳು ಕಳೆದಿವೆ. ಮುಖ್ಯಮಂತ್ರಿಯವರೂ ಈ ಬಗ್ಗೆ ಮಾತನಾಡುತ್ತಿಲ್ಲ.ಇದೇ ರೀತಿ ಮುಂದುವದರಿದರೆ ಪ್ರತ್ಯೇಕ ತುಳುನಾಡಿನ ಬೇಡಿಕೆ ಪ್ರಬಲವಾಗಲಿದೆ ಎಂದು ಅವರು ಹೇಳಿದರು.

yettinahl_stdent_protst_5 yettinahl_stdent_protst_6 yettinahl_stdent_protst_7

ಎತ್ತಿನಹೊಳೆ ಯೋಜನೆಯ ಹಣವನ್ನು ಕೆಲ ಭ್ರಷ್ಟ ಜನಪ್ರತಿನಿಧಿಗಳು, ಐಎಎಸ್ ಅಧಿಕಾರಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ. ಯೋಜನೆ ಫಲಕಾರಿಯಾಗುವುದಿಲ್ಲ ಎಂಬ ಅರಿವಿದ್ದರೂ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಹೇಳಿದ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಏನು ಮಾತನಾಡದೇ ಯಾಕೆ ಸುಮ್ಮನಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ದೂರಿದರು.

yettinahl_stdent_protst_8 yettinahl_stdent_protst_9 yettinahl_stdent_protst_10

ಕಾವೇರಿ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ರಾಜ್ಯ ಸರಕಾರ ಎತ್ತಿನಹೊಳೆ ಯೋಜನೆಯಲ್ಲಿ ಸ್ಪಂದನೆ ನೀಡದೆ ಸರಕಾರ ಮಲತಾಯಿಧೋರಣೆಯನ್ನು ಅನುಸರಿಸುತ್ತಿದೆ ಎಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ದಿನಕರ್ ಶೆಟ್ಟಿ ಆರೋಪಿಸಿದರು.

yettinahl_stdent_protst_11 yettinahl_stdent_protst_12 yettinahl_stdent_protst_13 yettinahl_stdent_protst_14 yettinahl_stdent_protst_15

ಪ್ರತಿಭಟನೆಯಲ್ಲಿ ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪ್ರವೀಣ್ ವಾಲ್ಕೆ, ಆನಂದ ಶೆಟ್ಟಿ ಅಡ್ಯಾರ್, ಪ್ರಜ್ಜಲ್ ಪೂಜಾರಿ, ಅಂಕಿತಾ ಸುವರ್ಣ, ಸುಜಿತ್, ಸಂಜಿತ್, ಪ್ರದೀಪ್, ಆಶಿಶ್, ಅನಿಶ್ ರಾವ್, ಅಶ್ವಿತ್ ಕೊಠಾರಿ, ತುಷಾರ್ ಕದ್ರಿ, ಜಯತ್, ಅರ್ಚನಾ ಮುಂತಾದವರು ಭಾಗವಹಿಸಿದ್ದರು.

Comments are closed.