ರಾಷ್ಟ್ರೀಯ

ಇಂದಿರಾ ಗಾಂಧಿಯನ್ನು ಹೊಗಳಿ, ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ ಶತೃಘ್ನ ಸಿನ್ಹಾ !

Pinterest LinkedIn Tumblr

shatrugna

ರಾಂಚಿ: ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೊಗಳುವ ಮೂಲಕ ಸಂಸದ ಹಾಗೂ ಹಿರಿಯ ನಟ ಶತೃಘ್ನ ಸಿನ್ಹಾ ಬಿಜೆಪಿಯನ್ನು ಮತ್ತೊಮ್ಮೆ ಮುಜುಗರಕ್ಕೀಡು ಮಾಡಿದ್ದಾರೆ.

ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇಂದು ಬದುಕಿದ್ದರೇ ನಾನು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೆ. ಕೇವಲ ಎರಡರಿಂದ ನಾಲ್ಕು ಜನಕ್ಕೋಸ್ಕರ ನಾನು ಬಿಜೆಪಿ ಸೇರಿದೆ ಎಂದು ಹೇಳುವ ಮೂಲಕ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದಾರೆ.

ಜಾರ್ಖಂಡ್ ನ ಜೆಮ್ ಶೆಡ್ ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಗಾಂಧಿ ಕುಟುಂಬ ರಾಜಕೀಯದಲ್ಲಿ ನೈತಿಕ ತತ್ವ ಸಿದ್ಧಾಂತಗಳನ್ನು ಒಳಗೊಂಡಿದೆ, ಹೀಗಾಗಿ ಇಂದಿರಾ ಗಾಂಧಿಯನ್ನು ನಾನು ತುಂಬಾ ಗೌರವಿಸುತ್ತೇನೆ. ಬೇರೆ ರಾಜಕಾರಣಿಗಳಿಗಿಂತ ಅವರು ತೀರಾ ಬಿನ್ನವಾಗಿದ್ದರು ಎಂದು ಹಾಡಿ ಹೊಗಳಿದ್ದಾರೆ.

Comments are closed.