
ಸುಳ್ಯ, ಅ.4: ರಸ್ತೆಯಲ್ಲಿ ಆಡ್ಡಲಾಗಿ ಬಂದ ಜಿಂಕೆಗೆ ಮಿನಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಜಿಂಕೆ ತೀವ್ರವಾಗಿ ಗಾಯಗೊಂಡ ಘಟನೆ ಸುಳ್ಯ ಅಮೀಪದ ಗೂನಡ್ಕ ಎಂಬಲ್ಲಿ ಸಂಭವಿಸಿದೆ.
ಘಟನೆಯಿಂದ ಮಿನಿ ಬಸ್ಸಿನ ಮುಂದಿನ ಗಾಜು ಒಡೆದು ಹೋಗಿದೆ.

ಮಿನಿ ಬಸ್ ಸುಳ್ಯದಿಂದ ಕೊಯನಾಡು ಕಡೆಗೆ ತೆರಳುತ್ತಿದ್ದ ವೇಳೆ ಗೂನಡ್ಕ ಬಳಿ ಗುಡ್ಡದ ಮೇಲಿಂದ ರಸ್ತೆಗೆ ಇಳಿದು ಪಕ್ಕದ ಕಾಡಿಗೆ ತೆರಳುತ್ತಿದ್ದ ಜಿಂಕೆ ಮಿನಿ ಬಸ್ ಕಂಡು ಗಾಬರಿಗೊಂಡು ರಸ್ಯೆ ಮಧ್ಯೆಯಿಂದ ಓಡಿದೆ.
ಈ ಸಂದರ್ಭ ಮಿನಿ ಬಸ್ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದು,ಜಿಂಕೆ ಬಸ್ಸಿಗೆ ಢಿಕ್ಕಿಯಾಗಿದೆ. ಸಡನ್ ಆಗಿ ಬ್ರೇಕ್ ಹಾಕಿದ ಪರಿಣಾಮ ಮಿನಿ ಬಸ್ಸಿನ ಮುಂದಿನ ಗಾಜು ಒಡೆದು ಹೋಗಿದೆ. ಮಾತ್ರವಲ್ಲದೇ ಡಿಕ್ಕಿಯ ರಭಸಕ್ಕೆ ಜಿಂಕೆಯ ಮುಖಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ.
Comments are closed.