ಕ್ರೀಡೆ

ಮೋದಿಯನ್ನು ನಿಂದಿಸಿದ ಪಾಕ್ ಕ್ರಿಕೆಟಿಗ

Pinterest LinkedIn Tumblr

javed-miandad_reuters_m

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್, ಪ್ರಧಾನಿ ಮೋದಿಯವರನ್ನು ನಿಂದಿಸಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ ನಂತರ ಪಾಕಿಸ್ತಾನದ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಮಿಯಾಂದಾದ್, ನರೇಂದ್ರ ಮೋದಿಯವರ ಅಪ್ಪ ಯಾರು? ಅಮ್ಮ ಯಾರು? ಎಂದು ಪ್ರಶ್ನಿಸಿದ್ದಾರೆ.

ಮೊದಲಿಗೆ ಭಾರತದಲ್ಲಿ ಕ್ರಿಕೆಟ್ ಆಡಿರುವ ಬಗ್ಗೆ, ಭಾರತೀಯರ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದು ಹೇಳಿದ ಮಿಯಾಂದಾದ್, ಮರುಕ್ಷಣದಲ್ಲೇ ಮೋದಿಯವರನ್ನು ಹಳಿಯಲು ಆರಂಭಿಸಿದ್ದಾರೆ. ಮಾತಿನ ನಡುವೆ ಪ್ರಧಾನಿ ಹೆಸರನ್ನು ನರೇಂದ್ರ ಮೂದಿ ಎಂದು ಉಚ್ಚರಿಸಿದ ಮಿಯಾಂದಾದ್, ಮೋದಿಯವರನ್ನು ಕೊಳೆತ ಮೊಟ್ಟೆ ಎಂದಿದ್ದಾರೆ. ಅಚಾನಕ್ ಆಗಿ ಮೋದಿ ಎಲ್ಲಿಂದ ಎದ್ದು ಬಂದರು? ಅವರ ಮನೆತನ ಯಾವುದು?

ಮೋದಿಯವರನ್ನು ಇಷ್ಟಪಡದೇ ಇರುವ ಜನ ಭಾರತದಲ್ಲಿದ್ದಾರೆ. ಮೋದಿಯವರನ್ನು ಇಷ್ಟಪಡದೇ ಇರುವ ಜನರು ಅದನ್ನು ಮುಕ್ತವಾಗಿ ಹೇಳಿಕೊಂಡಿದ್ದೂ ಇದೆ. ಮೋದಿ ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ. ಪಾಕಿಸ್ತಾನದ ಮಕ್ಕಳು ಮತ್ತು ಪುರುಷರು ದೇಶಕ್ಕಾಗಿ ಪ್ರಾಣ ನೀಡಲು ಸಿದ್ಧರಾಗಿದ್ದಾರೆ. ಒಂದು ವೇಳೆ ಭಾರತದ ವಿರುದ್ಧದ ಯುದ್ಧದಲ್ಲಿ ನಾವು ಹುತಾತ್ಮರಾಗಬೇಕಾಗಿ ಬಂದರೂ ನಮಗೆ ಖುಷಿಯಿದೆ, ನಾವು ಮುಯ್ಯಿಗೆ ಮುಯ್ಯಿ ತೀರಿಸುತ್ತೇವೆ. ಅವರು ತುಂಬಾ ದುರ್ಬಲರು, ಅವರಲ್ಲಿ ಸಾಕಷ್ಟು ಜನ ಇಲ್ಲ ಎಂದು ಮಿಯಾಂದಾದ್ ಹೇಳಿದ್ದಾರೆ.

ಮಿಯಾಂದಾದ್ ಅವರು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ವಿಡಿಯೊ ದೃಶ್ಯ ಸೆಪ್ಟೆಂಬರ್ 29ರಂದು ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದೆ.
ಜಾವೇದ್ ಮಿಯಾಂದಾದ್ ಅವರ ಈ ಟೀಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ, ಅನುರಾಗ್ ಠಾಕೂರ್, ಪಾಕಿಸ್ತಾನ ಕ್ರಿಕೆಟ್ ಮೈದಾನದಲ್ಲೂ, ರಣರಂಗದಲ್ಲಿಯೂ ಭಾರತದ ವಿರುದ್ಧ ಸೋತಿರುವ ‘ಶಾಕ್’ ನಿಂದ ಮಿಯಾಂದಾದ್ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಕಾಣುತ್ತದೆ ಎಂದಿದ್ದಾರೆ.

1965, 1971 ಮತ್ತು ಕಾರ್ಗಿಲ್ ಯುದ್ಧದಲ್ಲಿ ಪರಾಭವಗೊಂಡ ಪಾಕ್ ಇನ್ನೂ ಈ ಆಘಾತದಿಂದ ಹೊರಬಂದಿಲ್ಲ. ಅಷ್ಟೇ ಅಲ್ಲ ವಿಶ್ವಕಪ್ ಕ್ರಿಕೆಟ್‍ನಲ್ಲಿ ಇಲ್ಲಿಯವರೆಗೆ ಪಾಕಿಸ್ತಾನ ತಂಡಕ್ಕೆ ಭಾರತದ ವಿರುದ್ಧ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಅದು ಕ್ರಿಕೆಟ್ ಮೈದಾನವಾಗಲೀ, ರಣರಂಗವೇ ಆಗಿರಲಿ ಅಗತ್ಯ ಬಂದರೆ ನಾವು ಪಾಕಿಸ್ತಾನದ ವಿರುದ್ಧ ಹೋರಾಡಲು ಸಿದ್ಧ ಎಂದು ಪಿಟಿಐ ಜತೆ ಮಾತನಾಡಿದ ಠಾಕೂರ್ ಹೇಳಿದ್ದಾರೆ.

ವಿಡಿಯೊ

Every Pakistani, even every child, is ready for martyrdom: Pakistani cricketing legend Javed Miandad after India’s ‘surgical strikes’ claim pic.twitter.com/ykzuQpSkCw

— SAMAA TV (@SAMAATV) September 29, 2016

Comments are closed.