ಕರಾವಳಿ

ಕುಂದಾಪುರ: ಶಾರ್ಟ್ ಸರ್ಕ್ಯೂಟಿನಿಂದ ಮನೆಗೆ ಬೆಂಕಿ; ಮಹಿಳೆ ಸಜೀವ ದಹನ

Pinterest LinkedIn Tumblr

ಉಡುಪಿ: ಪ್ರಿಡ್ಜ್ ಗೆ ಅಳವಡಿಸಿದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಪ್ರಿಡ್ಜಿನ ಕಂಪ್ರೆಸ್ಸರ್ ಸ್ಪೋಟಗೊಂಡ ಕಾರಣ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ಮಹಿಳೆ ಸಜೀವವಾಗಿ ದಹನವಾದ ಘಟನೆ ಕುಂದಾಪುರದ ಮಾವಿನಕಟ್ಟೆ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ನೂರ್ ಝಹಾನ್ ಎನ್ನುವ ಮಹಿಳೆಯ ಬೆಂಕಿ ತಗುಲಿ ಪ್ರಾಣಕಳೆದುಕೊಂಡವರು.

mavinakatte_home_fire-1 mavinakatte_home_fire-2 mavinakatte_home_fire-3 mavinakatte_home_fire-4 mavinakatte_home_fire-5 mavinakatte_home_fire-6

ಮನೆಯಲ್ಲಿ ಒಬ್ಬಾಕೆಯೇ ಇರುವಾಗ ಈ ದುರ್ಘಟನೆ ಸಂಭವಿಸಿದ್ದು ಬೆಂಕಿಯ ತೀವ್ರತೆಗೆ ಸಂಪೂರ್ಣ ದೇಹ ಸುಟ್ಟುಕರಕಲಾಗಿದೆ. ಅಲ್ಲದೇ ಮನೆ ಬೆಂಕಿ ತಗುಲಿ ಭಾಗಶಃ ಹಾನಿಗೊಳಗಾಗಿದೆ. ಕುಂದಾಪುರ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂಧಿಸುವಲ್ಲಿ ಯಶಸ್ವಿಯಾದರು.

ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.

Comments are closed.