ಗಲ್ಫ್

ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರವಾರದ ಪೂರ್ಣಿಮಾರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದ ಇಂಡಿಯನ್ ಸೋಶಿಯಲ್ ಫಾರಂ

Pinterest LinkedIn Tumblr

poonima-kaaravaara

ಬ್ಯುಟಿ ಪಾರ್ಲರ್ ಉದ್ಯೋಗಕ್ಕೆಂದು ಸೌದಿ ಅರೇಬಿಯಾಕ್ಕೆ ತೆರಳಿ ಅಲ್ಲಿ ಅರೆಬಿಯೊಬ್ಬರ ಮನೆಯಲ್ಲಿ ಬಲವಂತವಾಗಿ ಮುಸುರೆ ತಿಕ್ಕುವ ಕೆಲಸ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕಾರವಾರದ ಪೂರ್ಣಿಮಾ ಎಂಬವರನ್ನು ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ತಲುಸುವಲ್ಲಿ ಇಂಡಿಯನ್ ಸೋಶಿಯಲ್ ಫಾರಂ ಯಶಸ್ವಿಯಾಗಿದೆ.

ಆದರೆ ಪೂರ್ಣಿಮಾರವರಿಗೆ ತಾನು ಏಜಂಟಿನ ಮೋಸದಾಟಕ್ಕೆ ಬಲಿಯಾಗಿದ್ದೇನೆ ಎಂದು ತಿಳಿದಿದದ್ದು ಸುಮಾರು ಮೂರೂ ತಿಂಗಳುಗಳ ಹಿಂದೆ ದೆಹೆಲಿಯಿಂದ ದುಬೈ ಮಾರ್ಗವಾಗಿ ಸೌದಿ ಅರೇಬಿಯಾಕ್ಕೆ ಬಂದಿಳಿದಾಗ ಬ್ಯುಟಿ ಪಾರ್ಲರ್ ಕೆಲಸವೆಂದು ಬಂದವಳಿಗೆ ಸಿಕ್ಕಿದು ತನ್ನ ಕಫೀಲ್ (ವೀಸಾ ಪ್ರಾಯೋಜಕ)ನ ಮನೆಯಲ್ಲಿ ಮುಸುರೆ ತಿಕ್ಕುವ ಕೆಲಸ. ಈ ವಿಷಯ ತಿಳಿದಂತೆ ಪೂರ್ಣಿಮಾರವರು ಕಂಡ ಕನಸುಗಳು ಒಂದೇ ಸಮನೆ ನುಚ್ಚು ನೂರಾದವು.

ಈ ಬಗ್ಗೆ ಮಾನಸಿಕವಾಗಿ ನೊಂದಿದ್ದ ಪೂರ್ಣಿಮಾ ಸಂಪೂರ್ಣವಾಗಿ ತಮ್ಮ ಆತ್ಮವಿಸ್ವಾಸ ಕಳೆದುಕೊಂಡಿದ್ದರು. ಈ ಕ್ಷಣದಲ್ಲಿ ಅವರಿಗೆ ನೆರವಾದದ್ದು ಕಾರವಾರ ಜಿಲ್ಲಾಧಿಕಾರಿಯ ವಾಟ್ಸಾಪ್ ದೂರು ಯೋಜನೆ. ಪೂರ್ಣಿಮಾರವರು ತಮ್ಮ ಸಂಕಷ್ಟವನ್ನು ಮತ್ತು ಏಜೆ೦ಟಿನ ಮೋಸದಾಟ ವನ್ನು ಕಾರವಾರ ಜಿಲ್ಲಾಧಿಕಾರಿಯವರಿಗೆ ವಾಟ್ಸಾಪಿನ ಮೂಲಕ ತಿಳಿಸಿದರು.

ಈ ಬಗ್ಗೆ ತಕ್ಷಣ ಎಚ್ಚೆತುಕೊಂಡ ಡಿಸಿಯವರು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ತಕ್ಷಣ ಪರಿಹಾರ ಒದಗಿಸುವಂತೆ ಕೇಳಿಕೊಂಡರು. ಇದರ ಬಗ್ಗೆ ಸಾಕಷ್ಟು ಪತ್ರಿಕೆಗಳು ಸಹ ವರದಿ ಮಾಡಿದವು. ಇತ್ತ ಪತ್ರಿಕಾ ಮಾಹಿತಿಯನ್ನು ಆಧರಿಸಿ ಇಂಡಿಯನ್ ಸೋಶಿಯಲ್ ಫಾರಂ ರಿಯಾದ್ ಘಟಕವು ತಕ್ಷಣ ಪೂರ್ಣಿಮಾರವರ ಸಹಾಯಕ್ಕೆ ಧಾವಿಸುತ್ತದೆ. ಇಸ್ಮಾಯಿಲ್ ಮಂಗಳಪೇಟೆ ಮತ್ತು ನವೀದ್ ಕುಂದಾಪುರ ಜೊತೆಗಿನ ತಂಡವು ಈ ಬಗ್ಗೆ ಕಾರ್ಯಾರಂಭಿಸುತ್ತದೆ.

ತನ್ನ ಮಾಲಕನ ಮನೆಯಲ್ಲಿ ಸಾಕಷ್ಟು ಸಂಕಷ್ಠಗಳನ್ನು ಸಹಿಸಿ ಧೈರ್ಯ ಕಳೆದುಕೊಂಡಿದ್ದ ಪೂರ್ಣಿಮಾರವರನ್ನು ದೂರವಾಣಿಯ ಮೂಲಕ ಸಂಪಕಿಸಿ ಆತ್ಮವಿಶ್ವಾಸ ನೀಡಲಾಯಿತು. ಮತ್ತು ಆದಷ್ಟು ಬೇಗನೆ ಸ್ವದೇಶಕ್ಕೆ ಕಳುಹಿಸಿ ಕೊಡುವ ಭರವಸೆ ನೀಡಲಾಯಿತು.

ಇಸ್ಮಾಯಿಲ್ ಮಂಗಳಪೇಟೆರವರು ರಿಯಾದಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ತಕ್ಷಣವೇ ಸೂಕ್ತ ಪರಿಹಾರ ನೀಡುವಂತೆ ಕೇಳಿಕೊಂಡರು. ಇತ್ತ ನವೀದ್ ಕುಂದಾಪುರರವರು ಕರ್ನಾಟಕ ಸರಕಾರದ ಅನಿವಾಸಿ ಭಾರತೀಯರ ಸಮಿತಿ (NRI Forum Karnataka) ಇದರ ಮುಖ್ಯಸ್ಥರಾದ ಹೇಮರವರನ್ನು ನಿರಂತರ ಸಂಪರ್ಕಿಸಿ ಪೂರ್ಣಿಮಾರವರನ್ನು ಸ್ವದೇಶಕ್ಕೆ ಕಳುಹಿಸಿ ಕೊಡಲು ಮನವಿ ಮಾಡಿದರು. ಮನವಿಗೆ ಉತ್ತಮ ಸ್ಪಂದನೆ ನೀಡಿದ ಹೇಮಾರವರು ಭಾರತೀಯ ವಿದೇಶಾಂಗ ಸಚಿವಾಲಯದ ಮೇಲೆ ಮತ್ತು ರಾಯಭಾರಿ ಕಚೇರಿಯ ಮೇಲೆ ಸಾಕಷ್ಟು ಒತ್ತಡ ಹೇರಿದರು.

ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯವು ತಕ್ಷಣವೇ ಏಜಂಟನನ್ನು ಹಿಡಿದು ಪೂರ್ಣಿಮರವರನ್ನು ಸ್ವದೇಶಕ್ಕೆ ಮರುಳಿಸುವ ಸಿದ್ಧತೆ ಮಾಡಿತು.

ಅಂತಿಮವಾಗಿ ಪೂರ್ಣಿಮಾ ಬಂಡೆಕರ್ ಇಂಡಿಯನ್ ಸೋಶಿಯಲ್ ಫಾರಂ ರಿಯಾದ್, ಕಾರವಾರ ಡಿಸಿ, ಅನಿವಾಸಿ ಭಾರತೀಯರ ಸಮಿತಿ (NRI Forum Karnataka) ಮತ್ತು ಭಾರತೀಯ ವಿದೇಶಾಂಗ ಸಚಿವಾಲಯದ ಜಂಟಿ ಪ್ರಯತ್ನದ ಮೂಲಕ ಸೆಪ್ಟೆಂಬರ್ 25 ರಂದು ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮುಂಬೈ ಮಾರ್ಗ ವಾಗಿ ತನ್ನ ಸ್ವಗ್ರಾಮಕ್ಕೆ ತಲುಪಿದರು.

ಯಾರು ಪರಿಚಯಸ್ಥರು ಇಲ್ಲದ ಸೌದಿ ಅರೇಬಿಯಾದಲ್ಲಿ ನಿಸ್ಸಾಹಯಕರಾಗಿದ್ದ ಸಂಧರ್ಭದಲ್ಲಿ ಸಹಾಯ ಮಾಡಿದ ಇಂಡಿಯನ್ ಸೋಶಿಯಲ್ ಫಾರಂ ತಂಡಕ್ಕೆ ಪೂರ್ಣಿಮರವರು ಚಿರಋಣಿಯೆಂದು ಕಣ್ಣೀರು ಹಾಕಿದರು.

ಕೆಲವು ತಿಂಗಳುಗಳ ಹಿಂದೆ ಸೌದಿಯಲ್ಲಿ ಗೃಹಬಂಧನದಲ್ಲಿದ ಉಡುಪಿ ಮೂಲದ ಮಾಲತಿಗೆ ಸ್ವದೇಶಕ್ಕೆ ಮರಳಲುಸಹಾಯ ಮಾಡಿದ ಇಂಡಿಯನ್ ಸೋಶಿಯಲ್ ಫಾರಂ ಇಂದು ಪೂರ್ಣಿಮಾರವರನ್ನು ತಾಯ್ನಾಡಿಗೆ ತಲುಪಿಸುವ ಮೂಲಕ ”ದಯೆಯೇ ಧರ್ಮದ ಮೂಲ” ಎನ್ನುತ ಸೌಹಾರ್ದತೆಗೆ ಸಾಕ್ಷಿಯಾಗಿದೆ.

Comments are closed.