ಕರಾವಳಿ

ಶಾಂತಿ ಸೌಹಾರ್ದತೆ ಉಳಿಸುವ ಮೂಲಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ : ಕಮೀಷನರ್ ಚಂದ್ರಶೇಖರ್

Pinterest LinkedIn Tumblr

twnhall_gandi_jaynthi_1

ಮಂಗಳೂರು, ಅಕ್ಟೋಬರ್.2: ಹಿರಿಯರ ತ್ಯಾಗದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಶಾಂತಿ ಸೌಹಾರ್ದತೆ ಉಳಿಸುವ ಮೂಲಕ ನಮಗೆ ಸಿಕ್ಕಿರುವ ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಚಂದ್ರಶೇಖರ್ ಹೇಳಿದರು.

ಅವರು ಬಾನುವಾರ ಗಾಂಧಿ ಜಯಂತಿ ಪ್ರಯುಕ್ತ ಭಾರತ್ ಸೇವಾದಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಗರದ ಪುರಭವನದ ಬಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆಗೈದು ಮಾತನಾಡಿದರು.

twnhall_gandi_jaynthi_2 twnhall_gandi_jaynthi_3 twnhall_gandi_jaynthi_4 twnhall_gandi_jaynthi_5 twnhall_gandi_jaynthi_6 twnhall_gandi_jaynthi_7 twnhall_gandi_jaynthi_8 twnhall_gandi_jaynthi_9 twnhall_gandi_jaynthi_10 twnhall_gandi_jaynthi_11 twnhall_gandi_jaynthi_12

ಪ್ರಭಾರ ಜಿಲ್ಲಾಧಿಕಾರಿ ಕುಮಾರ್, ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕೆಎಸ್ಸಾರ್ಟಿಸಿ ನಿರ್ದೇಶಕ ಸುಧೀರ್ ಟಿ.ಕೆ., ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಕೇಂದ್ರೀಯ ಸಮಿತಿ ಸದಸ್ಯ ಅಲ್ಪೋನ್ಸೋ ಫ್ರಾಂಕೋ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ ಮಾಸ್ತರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಸೇವಾದಳದ ವಿದ್ಯಾರ್ಥಿಗಳಿಂದ ನಗರದ ಅಂಬೇಡ್ಕರ್ (ಜ್ಯೋತಿ ವೃತ್ತ) ವೃತ್ತದಿಂದ ಮೆರವಣಿಗೆ ನಡೆಯಿತು.

Comments are closed.