
ನವದೆಹಲಿ: ಪಾಕಿಸ್ತಾನಕ್ಕೆ ಸೇರಿದ ದೋಣಿಯೊಂದು ಭಾನುವಾರ ಗುಜರಾತ್ನ ಪೋರ್ಬಂದರ್ನಲ್ಲಿ ಕಾಣಿಸಿಕೊಂಡಿದೆ. ಕರಾವಳಿ ಕಾವಲು ಪಡೆಯ ಸಮುದ್ರ ಪಾವಕ್ ನೌಕೆಯು ದೋಣಿಯನ್ನು ಜಪ್ತಿ ಮಾಡಿ, ಅದರಲ್ಲಿ ಇದ್ದ ಒಂಭತ್ತು ಜನರನ್ನು ವಶಕ್ಕೆ ಪಡೆದುಕೊಂಡಿದೆ.
ಬೆಳಿಗ್ಗೆ ಅಂತಾರಾಷ್ಟ್ರೀಯ ಗಡಿದಾಟಿದ ದೋಣಿಯನ್ನು ವಶಪಡಿಸಿಕೊಂಡ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಗಡಿಯಲ್ಲಿ ನಡೆದ ಉರಿ ದಾಳಿ ಹಾಗೂ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನಡೆಸಿದ ಸೀಮಿತ ದಾಳಿಯಿಂದ ಗಡಿ ಪ್ರದೇಶದಲ್ಲಿ ಇದೀಗ ಕಟ್ಟೆಚ್ಚರ ವಹಿಸಲಾಗಿದೆ. ರಕ್ಷಣಾ ಸಚಿವರಾದ ಮನೋಹರ ಪರಿಕ್ಕರ್ ಈಗಾಗಲೇ ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Comments are closed.