ಕರಾವಳಿ

ಬೈಂದೂರು ಬಿಜೆಪಿ ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾ ಪದಗ್ರಹಣ ಸಮಾರಂಭ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಬೈಂದೂರು ಬಿಜೆಪಿ ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನಾಗೂರು ಮಹಾಲಸ ಕಲ್ಚರಲ್ ಹಾಲ್ ನಲ್ಲಿ ನಡೆಯಿತು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ್ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬೈಂದೂರು ವಿಧಾನಸಭಾ ಕ್ಷೇತ್ರ ಬಹಳ ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು ಯುವಕರ ಹಾಗೂ ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟದ ಮೂಲಕ ಬೈಂದೂರಿನಲ್ಲಿ ಬಲಿಷ್ಟ ಬಿಜೆಪಿ ನಿರ್ಮಾಣ ಸಾಧ್ಯವಿದೆ. ಗ್ರಾಮಗ್ರಾಮಗಳಲ್ಲಿಯೂ ಪಕ್ಷ ಕಟ್ಟುವ ಹಾಗೂ ಬೆಳೆಸುವ ಕಾಯಕವನ್ನು ನೂತನ ಮೋರ್ಚಾಗಳ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರ ಒಗ್ಗೂಡುವಿಕೆಯಲ್ಲಿ ಮಾಡಬೇಕಿದೆ ಎಂದು ಕರೆಕೊಟ್ಟರು.

byndoor_bjp_programme-3 byndoor_bjp_programme-4 byndoor_bjp_programme-6 byndoor_bjp_programme-19 byndoor_bjp_programme-12 byndoor_bjp_programme-8 byndoor_bjp_programme-18 byndoor_bjp_programme-15 byndoor_bjp_programme-9 byndoor_bjp_programme-11 byndoor_bjp_programme-16 byndoor_bjp_programme-14 byndoor_bjp_programme-13 byndoor_bjp_programme-20 byndoor_bjp_programme-1 byndoor_bjp_programme-2 byndoor_bjp_programme-5 byndoor_bjp_programme-10 byndoor_bjp_programme-7 byndoor_bjp_programme-21

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಕ್ಷ ಬಲವರ್ಧನೆಗಾಗಿ ಬಿಜೆಪಿಯಲ್ಲಿ ವಿವಿಧ ಮೋರ್ಚಾಗಳನ್ನು ರಚನೆ ಮಾಡಿದ್ದು ಅವರೆಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಸಂಘಟನಾತ್ಮಕ ಹೋರಾಟದ ಮೂಲಕ ಸಮ್ರದ್ಧ ಭಾರತ ನಿರ್ಮಾಣ ಕಾರ್ಯಕ್ಕೆ ಕೈಹಾಕಬೇಕಿದೆ. ಕೇವಲ ಘೋಷಣೆ, ಭಾಷಣಗಳ ಮೂಲಕ ಶಕ್ತಿ ಪ್ರದರ್ಶನ ಮಾಡುವ ಜೊತೆಜೊತೆಗೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಗುರಿ ಹೊಂದಬೇಕಿದೆ. ಮಾಜಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರ ಕಾಲದಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡುವ ಕಾರ್ಯಕ್ರಮ ಹಮ್ಮಿಕೊಂಡ ಫಲವೇ ಇಂದು ಅಂದಜು ಒಂದು ಲಕ್ಷ ಗ್ರಾಮಪಂಚಾಯತಿ ಸದಸ್ಯರ ಪೈಕಿ 53ಸಾವಿರ ಮಂದಿ ಮಹಿಳೆಯರಿದ್ದಾರೆ ಎಂದರು.

ರಾಜ್ಯ ಸರಕಾರ ಬಡವರ ಹಾಗೂ ದುರ್ಬಲರ ಪರವಾಗಿಲ್ಲ. ಬಿಜೆಪಿ ಸರಕಾರವಿಲ್ಲದಿರುವ ಈ ಸಂದರ್ಭದಲ್ಲಿ ಬಡವರು ನಿತ್ಯ ವಿವಿಧ ಸಮಸ್ಯೆಗಳಿಂದ ಹೈರಾಣಗುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಸರಕಾರ ಸತ್ತಂತಿದೆ ಎಂದು ಅವರು ಕಿಡಿಕಾರಿದರು. ರಾಹುಲ್ ಹಾಗೂ ಪ್ರಧಾನಿ ಮೋದಿಯವರನ್ನು ಹೋಲಿಕೆ ಮಾಡುವುದು ಗುಲುಗುಂಜಿ ಹಾಗೂ ಚಿನ್ನವನ್ನು ಹೋಲಿಕೆ ಮಾಡಿದಂತೆ ಎಂದು ಶ್ರೀನಿವಾಸ್ ಪೂಜಾರಿ ಲೇವಡಿ ಮಾಡಿದರು.

ಬೈಂದೂರು ಬಿಜೆಪಿ ನೂತನ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ ಅವರಿಗೆ ನಿಕಟಪೂರ್ವಾಧ್ಯಕ್ಷೆ ನಯನಾ ಶ್ಯಾನುಭಾಗ್ ಬಿಜೆಪಿ ಧ್ವಜ ನೀಡುವ ಮೂಲಕ ಹಾಗೂ ಯುವ ಮೋರ್ಚಾದ ನೂತನ ಅಧ್ಯಕ್ಷ ಶರತ್ ಶೆಟ್ಟಿ ಅವರಿಗೆ ನಿಕಟಪೂರ್ವಾಧ್ಯಕ್ಷ ರಾಘವೇಂದ್ರ ನೆಂಪು ಧ್ವಜ ನೀಡುವ ಮೂಲಕ ಸ್ವಾಗತಿಸಿದರು. ಪದಾಧಿಕಾರಿಗಳು ಹಾಗೂ ಶಕ್ತಿಕೇಂದ್ರದ ಸದಸ್ಯರಿಗೆ ಈ ಸಂದರ್ಭ ಪುಷ್ಪ ನೀಡಿ ಸ್ವಾಗತಿಸಲಾಯಿತು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ತೋಳಾರ್ ಉಪಸ್ಥಿತಿತರಿದ್ದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಲಕ್ಷ್ಮೀನಾರಾಯಣ, ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಬಾಬು ಹೆಗ್ಡೆ, ಶಂಕರ್ ಪೂಜಾರಿ, ಸುರೇಶ ಬಟ್ವಾಡಿ, ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ, ಮಹೇಶ್ ಪೂಜಾರಿ, ಶ್ಯಾಮಲಾ ಕುಂದರ್, ಸಂಧ್ಯಾ ರಮೇಶ್, ನಯನಾ ಶ್ಯಾನುಭೋಗ್ ,ಜಯಂತಿ ಭಾಸ್ಕರ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.

Comments are closed.