ಕರಾವಳಿ

ಭಯೋತ್ಪಾದಕ ನೆಲೆಗಳ ಮೇಲೆ ಸೇನಾ ದಾಳಿ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿನಂದನೆ

Pinterest LinkedIn Tumblr

ganesh-karnik-pic_1

ಮಂಗಳೂರು : ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಗಡಿಯಾಚೆಯಿಂದ ನಿರಂತರವಾಗಿ ಪಾಕಿಸ್ಥಾನದಿಂದ ತರಬೇತಿಗೊಂಡು ನಮ್ಮ ದೇಶದ ಸೇನಾ ನೆಲೆಗಳು ಸೇರಿದಂತೆ ವಿವಿಧೆಡೆ ಭಯೋತ್ಪಾದಕ ಚಟುವಟಿಕೆಗಳ ಮೂಲಕ ನಾಗರಿಕರ ಜೀವ ಮತ್ತು ಸ್ವತ್ತುಗಳೊಂದಿಗೆ ಚೆಲ್ಲಾಟವಾಡುತ್ತಿದ್ದ ಪಾಕಿಸ್ಥಾನದ ಪ್ರಾಕ್ಸಿ ವಾರ್‌ಗೆ ದಿಟ್ಟ ಉತ್ತರ ನೀಡಿದ ಸೇನೆಯ ಕ್ರಮ ಶ್ಲಾಘನೀಯ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್   ತಿಳಿಸಿದ್ದಾರೆ.

ಇತ್ತೀಚೆಗೆ ಉರಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ರಾಜತಾಂತ್ರಿಕ ನಿರ್ಣಯಗಳೊಂದಿಗೆ ಸೆ.೨೯ರ ಮುಂಜಾನೆ ನಮ್ಮ ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳಿಗೆ ನುಗ್ಗಿ ೩೮ ಜನ ಭಯೋತ್ಪಾದಕರನ್ನು (೨ ಪಾಕ್ ಸೈನಿಕರು ಸೇರಿದಂತೆ) ಸದೆ ಬಡಿದಿರುವ ಭಾರತೀಯ ಸೇನೆಯ ಪರಾಕ್ರಮಿ ಸೈನಿಕರನ್ನು, ಅತ್ಯಂತ ಕರಾರುವಾಕ್ಕಾಗಿ ವಿಶೇಷ ಕಾರ್ಯಚರಣೆಯನ್ನು ವ್ಯವಸ್ಥಿತ ಹಾಗೂ ಯೋಜನಾಬದ್ಧವಾಗಿ ಕೈಗೊಂಡ ಸೇನೆಯ ಅಧಿಕಾರಿಗಳನ್ನು ಮತ್ತು ಈ ದಿಟ್ಟ ನಿರ್ಣಯವನ್ನು ಕೈಗೊಂಡ ನೆಚ್ಚಿನ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವನ್ನು ಸಮಸ್ತ ಭಾರತೀಯರ ಹಾಗೂ ಮಾಜಿ ಸೈನಿಕರ ಪರವಾಗಿ ಹಾರ್ದಿಕವಾಗಿ ಅಭಿನಂದಿಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ

Comments are closed.