ಕರ್ನಾಟಕ

ರಾಜ್ಯಕ್ಕೆ ಕುಡಿಯುವುದಕ್ಕೆ, ತಮಿಳುನಾಡಿಗೆ ಸಾಂಬಾ ಬೆಳಗೆ ನೀರು ಬೇಕು: ಸಿದ್ದು

Pinterest LinkedIn Tumblr

siddu-4ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ಕುರಿತ ಸಂಧಾನ ಸಭೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸದನದ ನಿರ್ಣಯಕ್ಕೆ ನಾವು ಬದ್ದರಾಗಿದ್ದೇವೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿರುವ ವಾಸ್ತವ ಸ್ಥಿತಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ. ಕರ್ನಾಟಕದಲ್ಲಿ ಕುಡಿಯುವುದಕ್ಕಾಗಿ ನೀರು ಕೇಳುತ್ತಿದ್ದಾರೆ. ಆದರೆ ತಮಿಳುನಾಡಿನಲ್ಲಿ ಸಾಂಬಾ ಬೆಳೆಗಾಗಿ ನೀರು ಕೇಳುತ್ತಿದ್ದಾರೆ. ಹೀಗಾಗಿ ಎರಡೂ ರಾಜ್ಯಗಳಿಗೆ ತಜ್ಞರ ಸಮಿತಿ ಕಳುಹಿಸಿ ವಾಸ್ತವ ಸ್ಥಿತಿ ಆದರಿಸಿ ವರದಿ ನೀಡಲಿ ಎಂದು ಉಮಾಭಾರತಿಗೆ ಮನವಿ ಮಾಡಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕದ ನಾಲ್ಕು ಜಲಾಶಯಗಳಿಂದ 27.6 ಟಿಎಂಸಿ ನೀರು ಲಭ್ಯವಿದೆ. ಕೇವಲ ಕುಡಿಯುವ ನೀರಿಗಾಗಿಯೇ ನಮಗೆ 27.6 ಟಿಎಂಸಿ ನೀರಿನ ಅವಶ್ಯಕತೆ ಇರುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Comments are closed.