ನವದೆಹಲಿ (ಸೆ.29): ಭಾರತದ ಗಡಿ ರೇಖೆಯನ್ನು ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕ್ ಸೇನೆಯ ಮೇಲೆ ಭಾರತೀಯ ಸೈನಿಕರು ಶಸ್ತ್ರದಾಳಿ ಮಾಡಿ ಯಶಸ್ವಿಯಾಗಿರುವುದಕ್ಕೆ ಅಮಿತ್ ಶಾ ಶ್ಲಾಘಿಸಿದ್ದಾರೆ.
ಅದೇ ರೀತಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ರರ್ ಹಾಗೂ ಭಾರತೀಯ ಸೇನೆಗೆ ಶಾ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತೀಯ ಸೈನಿಕರು ಶೌರ್ಯವನ್ನು ಪ್ರದರ್ಶಿಸಿದ್ದಾರೆ. ಪಾಕ್ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ನಡೆಸಿದ ಶಸ್ತ್ರದಾಳಿಯಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಜೀವಹಾನಿಯಾಗದಂತೆ ಸೈನಿಕರು ಶಸ್ತ್ರದಾಳಿ ನಡೆಸಿರುವುದು ಇದೇ ಮೊದಲು. ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.