
ನ್ಯೂಯಾರ್ಕ್(ಸೆ.29): ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಇರುವ ಅತಿ ದೊಡ್ಡ ಶಕ್ತಿ ಎಂದರೆ ಮತದಾನ. ಆದರೆ ಇಂದಿನ ದಿನದಲ್ಲಿ ಮತದಾನ ಮಾಡುವುದಕ್ಕೆ ವಿದ್ಯಾವಂತರಲ್ಲೇ ನಿರಾಸಕ್ತಿ ಮೂಡುತ್ತಿದ್ದು, ಈ ಹಿನ್ನಲೆಯಲ್ಲಿ ಜನರನ್ನು ಮತದಾನ ಮಾಡಿ ಎಂದು ಹುರಿದುಂಬಿಸಲು ಅಮೆರಿಕಾದ ಖ್ಯಾತ ಗಾಯಕಿ ಕೆಟಿ ಪೆರಿ ಬೆತ್ತಲಾಗಿದ್ದಾರೆ.
‘ಎಲ್ಲರು ಮತದಾನ ಮಾಡಿ’ ಎಂಬ ಅಭಿಯಾನಕ್ಕೆ ಮುಂದಾಗಿರುವ ಕೆಟಿ ಪೆರಿ, ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ನೀವು ಹೇಗೆ ಇದ್ದರು ಮತದಾನ ಮಾಡಬಹದು, ಬೇಕಿದ್ದರೇ ಬೆತ್ತಲೆಯಾಗಿ ಬೇಕಾದರು ಮತದಾನ ಮಾಡಿ ಎಂದು ತಾವು ಬೆತ್ತಲಾಗಿದ್ದಾರೆ.
ನವೆಂಬರ್ 8 ರಂದು ಅಮೆರಿಕಾದಲ್ಲಿ ಅಧ್ಯಕ್ಷಿಯ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
Comments are closed.