ಕರಾವಳಿ

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ :”ದ್ವೇಷ ರಾಜಕೀಯ ನಿಲ್ಲಿಸಿ” ಅಭಿಯಾನದಲ್ಲಿ ಪಿ ಎಫ್ ಐ ಆರೋಪ

Pinterest LinkedIn Tumblr

pfi_beedi_nataka_1

ಮಂಗಳೂರು / ಉಳ್ಳಾಲ, ಸೆಪ್ಟಂಬರ್, 27 : ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ವತಿಯಿಂದ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ “ದ್ವೇಷ ರಾಜಕೀಯ ನಿಲ್ಲಿಸಿ” ಅಭಿಯಾನದ ಅಂಗವಾಗಿ ಉಳ್ಳಾಲ ವಲಯದ ವತಿಯಿಂದ ಇತ್ತೀಚಿಗೆ ಕುತ್ತಾರ್ ಜಂಕ್ಷನ್ ನಲ್ಲಿ ಕಾರ್ನರ್ ಮೀಟ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮಾತನಾಡಿ, ಕೇಂದ್ರ ಸರಕಾರವು ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತ ವರ್ಗಗಳ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ. ಗೋ ಮಾಂಸ, ಸೂರ್‍ಯ ನಮಸ್ಕಾರ, ವಂದೇಮಾತರಂ ಹೆಸರಿನಲ್ಲಿ ಜನರ ಮದ್ಯೆ ಕಚ್ಚಾಟವನ್ನು ಉಂಟುಮಾಡುವ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಪೇರಿತ ಸಂಘಪಾರಿವಾರ ನಡೆಸಿಕೊಂಡು ಬರುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತ ಗೋಮಾಂಸ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಗೋವಿನಲ್ಲಿ ನಿಜಕ್ಕೂ ಪ್ರೀತಿಯಿದ್ದರೆ ಅಧಿಕಾರಕ್ಕೇರಿದಾಗಲೇ ಗೋ ಮಾಂಸ ರಪ್ತ್ ಮಾಡುವುದನ್ನು ನಿಲ್ಲಿಸಬೇಕಿತ್ತು ಎಂದು ದೂರಿದರು.

pfi_beedi_nataka_2 pfi_beedi_nataka_3 pfi_beedi_nataka_4 pfi_beedi_nataka_5 pfi_beedi_nataka_6

ಪ್ರಜ್ಙಾವಂತ ನಾಗರಿಕರು ದೇಶದ ಐಕ್ಯತೆ ಹಾಗು ದೇಶದ ಸಂವಿಧಾನವನ್ನು ಕಾಪಾಡಿಕೊಳ್ಳಲು ಮತ್ತು ದ್ವೇಷ ರಾಜಕೀಯ ವನ್ನು ಮುಕ್ತ ಗೋಳಿಸಲು “ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ”ದೊಂದಿಗೆ ಕೈಜೋಡಿಸ ಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು..

ಅಭಿಯಾನದ ಉಳ್ಳಾಲ ವಲಯ ಉಸ್ತುವಾರಿ ಅಬ್ಬಾಸ್ ಕಿನ್ಯ, ಉಳ್ಳಾಲ ವಲಯ ಪ್ರ.ಕಾರ್ಯದರ್ಶಿ ಸಿದ್ಕೀಕ್ ಕುಂಪಲ, ದೇರಳಕಟ್ಟೆ ಏರಿಯಾ ಕಾರ್ಯದರ್ಶಿ ಶಹೀದ್ ಕಿನ್ಯ, ಲತೀಫ್ ವಿಧ್ಯಾನಗರ, ಹಸೈನಾರ್ ಮಲಾರ್, ಸಿದ್ದೀಕ್ ಉಳ್ಳಾಲ, ಮುಸ್ತಫ ಮಲಾರ್, ಆಶ್ರಫ್ ಮಾಚಾರ್, ಜಮಾಲ್ ಜೋಕಟ್ಟೆ, ನಾಸೀರ್ ವಿಧ್ಯಾನಗರ, ನೌಫಲ್ ಪನೀರ್ ಮುತಾಂದವರು ಉಪಸ್ಥಿತರಿದ್ದರು. ಝಾಹೀದ್ ಮಲಾರ್ ಸ್ವಾಗತಿಸಿದರೆ, ರಹೀಮ್ ಮಲಾರ್ ವಂದಿಸಿದರು .

ಕಾರ್ಯಕ್ರಮದ ಅಂಗವಾಗಿ ಮದಕ, ಪಾವೂರು, ಗ್ರಾಮಚಾವಡಿ, ಇನೋಳಿ, ಮಲಾರ್, ಪಜೀರ್, ಕಲ್ಕಟ್ಟ, ತೌಡುಗೋಳಿ ಕ್ರಾಸ್, ಮುಡಿಪು,ದೇರಳಕಟ್ಟೆ, ಕೆ ಸಿ ರೋಡ್, ಬೀರಿ, ತೋಕ್ಕೊಟು ಜಂಕ್ಷನ್, ಉಳ್ಳಾಲ ಮುತಾಂದ ಕಡೆಗಳಲ್ಲಿ ಕಾರ್ನರ್ ಮೀಟ್ ಹಾಗು ಬೀದಿನಾಟಕ ಗಳು ನಡೆಯಿತು.

Comments are closed.