
ಮಂಗಳೂರು: ಕೊಣಾಜೆಯಲ್ಲಿರುವ ಮಂಗಳೂರು ವಿವಿಯಲ್ಲಿ ಕಂಡು ಬಂದ ಶೌಚಾಲಯದಲ್ಲಿ ಮೊಬೈಲ್ ಕೆಮರಾ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆಗಾಗಿ ಇದೀಗ ಮೊಬೈಲ್ ಮುಂತಾದ ದಾಖಲೆಗಳನ್ನು ಬೆಂಗಳೂರು ಸೈಬರ್‌ಕ್ರೈಂಗೆ ಪೊಲೀಸರು ಕಳುಹಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕೆಮರಾ ಮೂಲಕ ರೆಕಾರ್ಡ್ ಮಾಡಿದ ಪ್ರಕರಣದ ಕುರಿತಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಮಂಗಳೂರು ದಕ್ಷಿಣ ವಲಯ ಎಸಿಪಿ ಶ್ರುತಿ ಅವರ ನೇತೃತ್ವದ ತಂಡದ ತನಿಖೆ ಮುಂದುವರಿದಿದೆ.
ಮೊಬೈಲ್ ಕೆಮರಾ ಅಳವಡಿಕೆ ಕುರಿತಂತೆ ವಿಶ್ವವಿದ್ಯಾನಿಲಯದಲ್ಲಿ ಮೂವರು ವಿದ್ಯಾರ್ಥಿಗಳನ್ನು ಮತ್ತು ಕೆಲವು ಸಿಬಂದಿ ವಿಚಾರಣೆಗೊಳಪಡಿಸಲಾಗಿದೆ. ಈಗಾಗಲೇ ವಿ.ವಿ. ಕ್ಯಾಂಪಸ್‌ನಲ್ಲಿ ಪೊಲೀಸರು ಮಹಜರು ನಡೆಸಿದ್ದು, ಆರೋಪಿಯ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ಬೆಂಗಳೂರು ಸೈಬರ್ ಕ್ರೈಂನಿಂದ ದಾಖಲೆಗಳು ವಾರದಲ್ಲೇ ಬರಲಿದ್ದು, ಆ ವರದಿಯ ಮೇಲೆ ತನಿಖೆ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Comments are closed.