ಕರಾವಳಿ

ಆರ್‌ಎಸ್‌ಎಸ್ ಮುಖಂಡರು ಹಾಗೂ ಕ್ರೈಸ್ತ ಮುಖಂಡರುಗಳಿಂದ ಹಬ್ಬಗಳಿಗೆ ಪರಸ್ಪರ ಶುಭಾಷಯ ವಿನಿಮಯ

Pinterest LinkedIn Tumblr

Bala_yrshu_Rss_1

ಮಂಗಳೂರು,ಸೆ.4 : ಆರ್ ಎಸ್ ಎಸ್ ಪ್ರಮುಖರು ಹಾಗೂ ಕ್ರೈಸ್ತ ಮುಖಂಡರು ಹಿಂದೂಗಳ ಪವಿತ್ರ ಹಬ್ಬ ಗೌರಿಗಣೇಶೋತ್ಸವ ಹಾಗೂ ಕ್ರೈಸ್ತ ಭಾಂಧವರ ಪವಿತ್ರ ಹಬ್ಬವಾದ ತೆನೆಹಬ್ಬ ಸಮಾರಂಭಕ್ಕೆ ಪರಸ್ಪರ ಶುಭಾಷಯ ಕೋರುವ ಕಾರ್ಯಕ್ರಮ ಶನಿವಾರ ನಗರದ ಬಿಕರ್ನಕಟ್ಟೆ ಬಾಲಯೇಸು ಮಂದಿರದಲ್ಲಿ ನಡೆಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರುಗಳಾದ ಡಾ. ಸತೀಶ್ ರಾವ್, ಭರತ್ ರಾಜ್ ಮತ್ತು ಸಂಘನಿಕೇತನ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಕೆ. ಪದ್ಮನಾಭ ಅವರು ಮಾತೆ ಶನಿವಾರ ನಗರದ ಬಿಕರ್ನಕಟ್ಟೆ ಬಾಲಯೇಸು ಮಂದಿರಕ್ಕೆ ತೆರಳಿ ಮರಿಯಮ್ಮ ಮೂರ್ತಿಗೆ ಆಗರಬತ್ತಿ ಹಚ್ಚಿ ಬಳಿಕ ಬಿಕರ್ನಕಟ್ಟೆ ಬಾಲಯೇಸು ಮಂದಿರದ ನಿದೇರ್ಶಕ ಫಾದರ್ ಎಲಿಯಾಸ್ ಡಿಸೋಜ ಅವರಿಗೆ ಫಲಪುಷ್ಪವನ್ನು ಹಸ್ತಾಂತರಿಸಿ ಕ್ರೈಸ್ತರ ತೆನೆಹಬ್ಬಕ್ಕೆ ಶುಭಾಶಯ ಕೋರಿದರು.

Bala_yrshu_Rss_2 Bala_yrshu_Rss_3 Bala_yrshu_Rss_4

ಬಳಿಕ ಸಂಘದ ಮುಖಂಡರು ಫಾದರ್ ಎಲಿಯಾಸ್ ಡಿಸೋಜ ಮತ್ತು ಮೈಸೂರು ಧ್ಯಾನವನದ ಪ್ರ.ಧರ್ಮಗುರು ಫಾದರ್ ಡೊಮಿನಿಕ್ ವಾಝ್ ಅವರಿಗೆ ಸೋಮವಾರದಿಂದ ಮಂಗಳೂರು ಸಂಘನಿಕೇತನದಲ್ಲಿ ಆರಂಭಗೊಳ್ಳಲಿರುವ ಗೌರಿಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ನೀಡಿ ಕ್ರೈಸ್ತಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದರು.

ಫಾದರ್ ಪ್ರಕಾಶ್ ಡಿಕುನ್ಹಾ ಸ್ವಾಗತಿಸಿ, ವಂದಿಸಿದರು. ಫ್ರಾಂಕ್ಲಿನ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.

Comments are closed.