ಕರಾವಳಿ

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ / ದೇವರ ನಂಬಿಕೆ, ವಿಶ್ವಾಸದಿಂದ ಫಲ ಪ್ರಾಪ್ತಿ – ಲಕ್ಷೀನಾರಾಯಣ ಆಶ್ರಣ್ಣ

Pinterest LinkedIn Tumblr

Mubai_varamahalakshmi_1

ವರದಿ : ಈಶ್ವರ ಎಂ. ಐಲ್

ಮುಂಬಯಿ : “ದೇವರು ಯಾವಾಗಲು ಭಕ್ತನ ಭಕ್ತಿಯ ಭಾರವನ್ನು ನೋಡುತ್ತಾನೆ. ಭಕ್ತಿಯಿಂದ ದೇವರನ್ನು ಗಟ್ಟಿಯಾಗಿ ಹಿಡಿದಲ್ಲಿ ನಮ್ಮ ರಕ್ಷಣೆಯಾಗುತ್ತದೆ. ನಮ್ಮ ದೇವರು ನಮ್ಮನ್ನು ರಕ್ಷಿಸುತ್ತಾರೆ. ದೇವರನ್ನು ಭಕ್ತಿ, ಶ್ರದ್ದೆಯಿಂದ ಹಾಗೂ ವಿಶ್ವಾಸದಿಂದ ನಂಬಿದಲ್ಲಿ ಫಲ ಪ್ರಾಪ್ತಿ” ಎಂದು ಕಟೀಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷೀನಾರಾಯಣ ಆಶ್ರಣ್ಣರು ಅಭಿಪ್ರಾಯಪಟ್ಟರು.

ಆ. 28 ರಂದು ಅಪರಾಹ್ನ ಮಲಾಡ್ ಪೂರ್ವ ಕುರಾರ್ ವಿಲೇಜ್ ಅಪ್ಪಾವಾಡಿ ಜೀಜಾಮಾತ ಶಾಲೆಯ ಆವರಣದಲ್ಲಿ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ವತಿಯಿಂದ ಪತ್ರಕರ್ತ ಬಿ. ದಿನೇಶ್ ಕುಲಾಲ್ ಅವರ ಸಾರಥ್ಯದಲ್ಲಿ ಜರಗಿದ 7ನೇ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಗೆ ಆಗಮಿಸಿ ಸಾಧಕರನ್ನು ಸನ್ಮಾನಿಸಿ ಆಶೀರ್ವಚನ ನೀಡುತ್ತಾ ಭಕ್ತಿ, ಶ್ರದ್ದೆಯಿದ್ದಲ್ಲಿ ದೇವರು ನಮ್ಮ ದಾರಿ ತಪ್ಪಲು ಬಿಡಲಿಕ್ಕಿಲ್ಲ. ಅದು ಇಲ್ಲಿ ನಡೆಯುತ್ತಿದೆ. ಭಕ್ತಿ, ಶ್ರದ್ದೆಯು ಯಾವ ಅಂಗಡಿಯಲ್ಲಿ ದೊರೆಯಲಿಕ್ಕಿಲ್ಲ ಅದು ನಮ್ಮಲ್ಲಿಯೇ ಇದೆ. ಮಕ್ಕಳಿಗೆ ದೈವ ದೇವರ ಬಗ್ಗೆ ಚಿಂತನೆಯನ್ನು ಹುಟ್ಟಿಸಬೇಕು, ಅದೂ ಇಲ್ಲಿ ಕಾಣುತ್ತಿದೆ. ಎಂದರು.

Mubai_varamahalakshmi_11 Mubai_varamahalakshmi_12

Mubai_varamahalakshmi_2 Mubai_varamahalakshmi_3 Mubai_varamahalakshmi_4 Mubai_varamahalakshmi_5 Mubai_varamahalakshmi_6 Mubai_varamahalakshmi_7 Mubai_varamahalakshmi_8 Mubai_varamahalakshmi_9 Mubai_varamahalakshmi_10

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ ಎನ್. ಶೆಟ್ಟಿಯವರು ವಹಿಸಿದ್ದು ಪ್ರಾಸ್ತಾವಿಕ ನುಡುಗಳನ್ನಾಡುತ್ತಾ ನಾವು ಪರಿಸರದ ಮಕ್ಕಳ ಕಾರ್ಯಕ್ರಮಕ್ಕೆ ಹಾಗೂ ಮಕ್ಕಳಿಗೆ ಶೈಕ್ಷಣಿಕ ಸಹಾಯ ನೀಡುದರೊಂದಿಗೆ ಲಕ್ಷ್ಮೀ ಹಾಗು ಸರಸ್ವತಿಯನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿತ್ತಿರುವೆವು. ಅದೇ ರೀತಿ ಪ್ರತೀ ವರ್ಷ ಸಮಿತಿಯಲ್ಲಿ ಸೇವೆ ಮಾಡುತ್ತಿರುವ ಸದಸ್ಯರನ್ನು ಗುರುತಿಸಿ ಗೌರವಿಸುತ್ತಿರುದರೊಂದಿಗೆ ನಮ್ಮ ಸಮಿತಿಯು ಸಮಾಜ ಸೇವಾ ನಿರತವಾಗಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಜೋಗೇಶ್ವರಿ ಜಗದಂಬಾ ಕಾಳಬೈರವ ಮಂದಿರದ ಆಡಳಿತ ಮೊಕ್ತೇಸರ ಜಿ. ಟಿ, ಆಚಾರ್ಯ, ಅಭ್ಯುದಯ ಬ್ಯಾಂಕಿನ ಡಿ.ಜಿ.ಎಂ. ಪ್ರೇಮನಾಥ ಸಾಲಿಯಾನ್ ದಂಪತಿ, ಮಲಾಡ್ ಕುರಾರ್ ವಿಲೇಜ್ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಕಾರ್ಯದರ್ಶಿ ಎಂ. ಡಿ. ಬಿಲ್ಲವ, ಚಾಮುಂಡೇಶ್ವರಿ ಸೇವಾ ಸಮಿತಿ ಮಲಾಡ್ ನ ಅಧ್ಯಕ್ಷ ಗೋವಿಂದ ಗೌಡ ದಂಪತಿ, ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಸ್ಥಾಪಕ ಸದಸ್ಯ ದೇವರಾಜ ಬಿ. ಕೋಟ್ಯಾನ್ ದಂಪತಿ ಇವರನ್ನು ಶ್ರೀ ಲಕ್ಷೀನಾರಾಯಣ ಆಶ್ರಣ್ಣ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಸನ್ಮಾನಿಸಿದರು. ಸನ್ಮಾನ ಪತ್ರವನ್ನು ರತ್ನ ಡಿ. ಕುಲಾಲ್ ವಾಚಿಸಿದರು. ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ ಎನ್. ಶೆಟ್ಟಿ ದಂಪತಿಯನ್ನು ಶ್ರೀ ಲಕ್ಷೀನಾರಾಯಣ ಆಶ್ರಣ್ಣ ರು ಸನ್ಮಾನಿಸಿದರು.

ಸಮಾರಂಭಕ್ಕೆ ಗೌರವ ಅತಿಥಿಗಳಾಗಿ ಪುರೋಹಿತ ಎಂ. ಜೆ. ಪ್ರವೀಣ್ ಭಟ್, ಬಂಟರ ಸಂಘ ಮುಂಬಯಿಯ ನಿಕಟ ಪೂರ್ವ ಅದ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟರ ಸಂಘ ವಸಾಯಿ – ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಕೆ. ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಮ ಸುಂದರ ಶೆಟ್ಟಿ, ಸುರೇಶ್ ಶೆಟ್ಟಿ ಕೇದಗೆ, ರಂಗಪ್ಪ ಗೌಡ ಸಂತೋಷ್ ಪೂಜಾರಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಅತಿಥಿಗಳಲ್ಲದೆ ಸಮಿತಿಯ ಗೌ. ಕಾರ್ಯದರ್ಶಿ ಗಣೇಶ್ ಎಲ್. ಕುಂದರ್, ಕೋಶಾಧಿಕಾರಿ ಜಗನ್ನಾಥ ಎಚ್. ಮೆಂಡನ್, ಸಂತೋಷ್ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಲಾಡ್ ಪರಿಸರದ ಮಕ್ಕಳಿಂದ ನೃತ್ಯ ವೈಭವ ಹಾಗೂ ಸಂಜೆ ಸಭಾ ಕಾರ್ಯಕ್ರಮವು ಜರಗಿತು. ನೃತ್ಯ ವೈಭವ ದಿಂದ ರಂಜಿಸಿದ ಮಲಾಡ್ ಪರಿಸರದ ಪ್ರತಿಭಾವಂತ ಮಕ್ಕಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯವನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಪತ್ರಕರ್ತ ದಿನೇಶ್ ಕುಲಾಲ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀಮತಿ ಆಚಾರ್ಯ, ಸೌಮ್ಯ ಮೆಂಡನ್, ಯೋಗೇಶ್ವರಿ ಗೌಡ, ಶ್ವೇತ ಗೌಡ ಮೊದಲಾದವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಮೀರಾರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರ ಪೌರೋಹಿತ್ಯದಲ್ಲಿ ಸುಮಂಗಲೆಯರಿಂದ ವರಮಹಾಲಕ್ಷ್ಮೀ ಪೂಜೆಯು ಹಾಗೂ ಅನ್ನ ಸಂತಣೆ ನಡೆಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ, ಸತೀಶ್ ಭಟ್, ಸಂತೋಷ್ ಪೂಜಾರಿ, ದೇವು ಬಿ. ಕೋಟ್ಯಾನ್, ಶೈಲೇಶ್ ಪೂಜಾರಿ, ಶೇಖರ್ ಪೂಜಾರಿ, ಅಂಡಾರು ಕೃಷ್ನ ಪ್ರಭು, ಮೄತ್ಯುಂಜಯ ಪಲ್ಲಿ, ಜಯರಾಮ್ ಪಾಟ್ಕರ್, ಮಹಬಲ ಪೂಜಾರಿ, ರವಿ ಮೂಲ್ಯ, ಮಹೇಶ್ ಗೌಡ, ಐಶ್ವರ ಕುಲಾಲ್, ಚಂದ್ರಶೇಖರ ಶೆಟ್ಟಿ, ನಿತ್ಯಾನಂದ ಕೋಟ್ಯಾನ್, ಸುಂದರ ಪೂಜಾತಿ, ದಿನೇಶ್ ಕುಂಬ್ಲೆ, ಕುಮರೇಶ್ ಆಚಾರ್ಯ, ಸೀತಾರಾಮ ಅಮೀನ್, ಸಿದ್ದರಾಮ ಗೌಡ, ಸೋಮಾನಥ ವಾಗ್ಲೆ, ಉದಯ ಬಿ. ಸಾಲ್ಯಾನ್, ದಿನೇಶ್ ಪೂಜಾರಿ, ಸನತ್ ಪೂಜಾರಿ, ಪ್ರತೀಕ್ ಶೆಟ್ಟಿ, ಸಚಿನ್ ವಾಗ್ಲೆ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Comments are closed.