ಕರಾವಳಿ

ಉಡುಪಿ: ಸಾಲಿಗ್ರಾಮ ಪೇಟೆಗಳ ಅಂಗಡಿಗಳಿಗೆ ದಾಳಿ; ಪ್ಲಾಸ್ಟಿಕ್ ವಶ

Pinterest LinkedIn Tumblr

ಉಡುಪಿ: ಪ್ಲಾಸ್ಟಿಕ್ ನಿಷೇಧದ ಹಿನ್ನಲೆಯಲ್ಲಿ ಸಾಲಿಗ್ರಾಮ ಮುಖ್ಯಾಧಿಕಾರಿ ಹಾಗೂ ಆರೋಗ್ಯ ನಿರೀಕ್ಷಕರು ಮತ್ತು ಸಿಬ್ಬಂದಿಯವರ ಸಹಯೋಗದೊಂದಿಗೆ ಪೇಟೆಯಲ್ಲಿರುವ ಅಂಗಡಿ ಮತ್ತು ಮಳಿಗೆಗಳಿಗೆ ದಿಢೀರ್ ದಾಳಿ ನಡೆಸಿ, ಪ್ಲಾಸ್ಟಿಕ್ ನಿಷೇಧವಿದ್ದರೂ ಪ್ಲಾಸ್ಟಿಕ್ ಕವರ್‌ಗಳನ್ನು ಗ್ರಾಹಕರಿಗೆ ವಿತರಿಸುತ್ತಿರುವ ಅಂಗಡಿ ಮಾಲಿಕರ ಬಳಿ ಇರುವ ಪ್ಲಾಸ್ಟಿಕ್ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಬಸ್ ನಿಲ್ದಾಣದ ಆಸುಪಾಸು ಹಾಗೂ ಪೇಟೆಯಲ್ಲಿರುವ ಅಂಗಡಿಗಳಿಗೆ ದಾಳಿ ನಡೆಸಿ ಪರಿಶೀಲನೆ ಮಾಡಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Saligrama_Plastick_Vasha (1) Saligrama_Plastick_Vasha (2)

ಪಟ್ಟಣ ಪಂಚಾಯತ್ ಎಲ್ಲಾ ಅಂಗಡಿ ಮಾಲಿಕರಿಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮುಕ್ತ ಪ್ರದೇಶವೆಂದು ಘೋಷಿಸಲು ಎನ್‌ಜಿ‌ಓ ಸಂಘಟನೆಯ ಮೂಲಕ ಹಾಗೂ ಸ್ವಸಹಾಯ ಗುಂಪುಗಳ ನೆರವು ಪಡೆದು ಕ್ರಮ ವಹಿಸಲಾಗುವುದು. ದಾಳಿಯಲ್ಲಿ ಮುಖ್ಯಾಧಿಕಾರಿ ಆರ್ ಶ್ರೀಪಾದ್, ಆರೋಗ್ಯ ನಿರೀಕ್ಷಕಿ ಮಮತಾ ಎಂ. ಕಂದಾಯ ನಿರೀಕ್ಷಕ ಅಂಜನಿ ಗೌಡ ಮತ್ತು ಕಿರಿಯ ಅಭಿಯಂತರರಾದ ರಾಜಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.

Comments are closed.