ಕರಾವಳಿ

‘ಐಕಾನ್ ಆಫ್ ದ ಇಯರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡ ” ಬಿಸಿ ಬಿಸಿ ತುಪ್ಪ”

Pinterest LinkedIn Tumblr

ragini_trvasi_arad

ಬೆಂಗಳೂರು: ಸದಾ ಸಾಮಾಜಿಕ ಜಾಲತಾಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಟಿ ರಾಗಿಣಿ ದ್ವಿವೇದಿ ಅವರು, ಈ ವರ್ಷದ ‘ದಿ ಬೆಸ್ಟ್’ ಸಾಧಕಿ ಎನಿಸಿಕೊಂಡಿದ್ದಾರೆ.ಮೊದಲು ಗುಂಡ-ಗುಂಡಗೆ ಇದ್ದ ನಟಿ ರಾಗಿಣಿ ದ್ವಿವೇದಿ ಅವರೀಗ ತೆಳ್ಳಗಾದ ಮೇಲೆ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ರಾಗಿಣಿ ಅವರು ಇದೀಗ ವಿಶೇಷ ಪ್ರಶಸ್ತಿಯೊಂದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ನ್ಯಾಷನಲ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ ವತಿಯಿಂದ ಪ್ರತೀ ವರ್ಷ ‘ಐಕಾನ್ ಆಫ್ ದ ಇಯರ್’ ಅಂತ ಸಾಧಕರಿಗೆ ಹಾಗೂ ಸ್ಫೂರ್ತಿಯ ಸೆಲೆಯಾದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಅದರಂತೆ ಈ ಬಾರಿ, ‘ಐಕಾನ್ ಆಫ್ ದ ಇಯರ್’ ವಿಶೇಷ ಪ್ರಶಸ್ತಿ ನಟಿ ರಾಗಿಣಿ ದ್ವಿವೇದಿ ಅವರ ಮುಡಿಗೇರಿದೆ. ದೆಹಲಿಯಲ್ಲಿ ನಟಿ ರಾಗಿಣಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ದೆಹಲಿಯಲ್ಲಿ ನಡೆಯುವ ಈ ವಿಶೇಷ ಸಮಾರಂಭದಲ್ಲಿ, ವಿಜ್ಞಾನಿಗಳು, ಪ್ರೊಫೆಸರ್ ಗಳು, ಅನೇಕ ಕಾಲೇಜುಗಳ ಮುಖ್ಯಸ್ಥರು ಮತ್ತು ಪ್ರಿನ್ಸಿಪಾಲ್ ಗಳು ಹಾಜರಿದ್ದರು. 2016ರ ‘ಐಕಾನ್ ಆಫ್ ದ ಇಯರ್’ ಪ್ರಶಸ್ತಿ ಬಂದಿದ್ದಕ್ಕೆ ತುಂಬಾ ಖುಷಿಯಾಗಿರುವ ನಟಿ ರಾಗಿಣಿ ದ್ವಿವೇದಿ ಅವರು, ಪ್ರಶಸ್ತಿ ಕೈಯಲ್ಲಿ ಹಿಡಿದಿರುವ ಫೋಟೋವನ್ನು ಟ್ವಿಟ್ಟರ್-ಫೇಸ್ ಬುಕ್ ನಲ್ಲಿ ಶೇರ್ ಮಾಡಿ, ಈ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Comments are closed.