ಕರಾವಳಿ

ಹುಡುಗರ ಫ್ಯಾಷನೇಬಲ್ ಗಡ್ಡದ ಹಿಂದಿನ ಗುಟ್ಟು.

Pinterest LinkedIn Tumblr

beard_boy_pic

ಮಂಗಳೂರು: ಕಾಲಕ್ಕೆ ತಕ್ಕಂತೆ ಫ್ಯಾಷನ್ ಕೂಡ ಬದಲಾಗುತ್ತಾ ಇರುತ್ತದೆ. ಮೊನ್ನೆ ಇದ್ದಂತಹ ಫ್ಯಾಷನ್ ನಾಳೆ ಇರುವುದಿಲ್ಲ. ಒಂದು ವರ್ಷದ ಹಿಂದೆ ಇದ್ದ ಬಟ್ಟೆಯ ವಿನ್ಯಾಸವನ್ನು ಈಗ ಯಾರೂ ಕೇಳುವವರಿಲ್ಲ. ಅದೇ ಫ್ಯಾಷನ್ ಲೋಕ. ಕೂದಲು, ಬಟ್ಟೆ, ಗಡ್ಡ ಹೀಗೆ ಎಲ್ಲದರಲ್ಲೂ ಒದೊಂದು ಫ್ಯಾಷನ್ ಬದಲಾಗುತ್ತಾ ಇರುತ್ತದೆ.

ಸಂಪೂರ್ಣವಾಗಿ ಗಡ್ಡ ಮೀಸೆ ಬೋಳಿಸಿಕೊಂಡ ಫ್ಯಾಷನ್ ಹಿಂದೆ ಇತ್ತು. ಆದರೆ ಈಗ ಕೆಲವೊಂದು ಸಿನಿಮಾ ನಾಯಕರು ಗಡ್ಡ ಮೀಸೆ ಬಿಡುತ್ತಿರುವ ಕಾರಣದಿಂದಾಗಿ ಅದು ಫ್ಯಾಷನ್ ಆಗಿ ಹೋಗಿದೆ. ಗಡ್ಡ ಮೀಸೆ ಬಿಡುವ ಪುರುಷರು ಈಗ ಮಹಿಳೆಯರನ್ನು ಸೆಳೆಯಲು ಯಶಸ್ವಿಯಾಗುತ್ತಿದ್ದಾರೆ ಎಂದರೆ ಇದನ್ನು ನಂಬಲೇಬೇಕು.

ಹೌದು, ಒಂದು ಕಾಲದಲ್ಲಿ ಮಹಿಳೆಯರಿಗೆ ಗಡ್ಡಮೀಸೆ ಬೋಳಿಸಿಕೊಂಡ ಪುರುಷರು ಇಷ್ಟವಾಗುತ್ತಿದ್ದರು.ಆದರೆ ಈಗ ಗಡ್ಡ ಬಿಟ್ಟಿರುವ ಪುರುಷರು ಅವರಿಗೆ ಇಷ್ಟವಾಗುತ್ತಿದ್ದಾರೆ. ಇದಕ್ಕಾಗಿಯೇ ಪುರುಷರು ಕೂಡ ಗಡ್ಡ ಬಿಟ್ಟು ಮಹಿಳೆಯರನ್ನು ಸೆಳೆಯಲು ಪ್ರಯತ್ನಿಸುತ್ತಾ ಇದ್ದಾರೆ.

ಆದರೆ ಮಹಿಳೆಯರಿಗೆ ಗಡ್ಡದಾರಿ ಪುರುಷರು ಇಷ್ಟವಾಗಲು ಕಾರಣವೇನೆಂದು ಕೇಳಿದರೆ ನೀವು ಮನಸ್ಸಿನಲ್ಲೇ ನಗಬಹುದು. ಮಹಿಳೆಯರ ಕೋಮಲವಾದ ಮುಖಕ್ಕೆ ಗಡ್ಡ ತಾಗಿದಾಗ ಮತ್ತು ಕಿಸ್ ನೀಡುವಾಗ ಆಗುವ ಅನುಭವ ಹೇಳತೀರದು. ಗಡ್ಡದಾರಿ ಪುರುಷರು ಮಹಿಳೆರಿಗೆ ಇಷ್ಟವಾಗುವುದು ಯಾಕೆಂದು ಮುಂದೆ ಓದುತ್ತಾ ಅರಿತುಕೊಳ್ಳಿ….

ಪುರುಷರು ಗಡ್ಡ ಬಿಟ್ಟರೆ ಆಗ ಅವರು ಸಂಪೂರ್ಣ ಪುರುಷರಂತೆ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಪುರುಷರ ಗಡ್ಡವು ಮಹಿಳೆಯರ ಹೃದಯ ಬಡಿತವನ್ನು ಸಾವಿರಾರು ಪಟ್ಟು ಹೆಚ್ಚಿಸುವುದು!

ಗಡ್ಡಮೀಸೆ ಬೋಳಿಸಿಕೊಂಡಿರುವ ಪುರುಷರಿಗೆ ಹೋಲಿಸಿದರೆ ಗಡ್ಡ ಬಿಟ್ಟಿರುವಂತಹ ಪುರುಷರು ಹೆಚ್ಚು ಪ್ರೌಢ ಹಾಗೂ ಗಂಭೀರವಾಗಿ ಕಾಣುತ್ತಾರೆ. ಇದರಿಂದಾಗಿ ಗಡ್ಡ ಬಿಟ್ಟಿರುವ ಪುರುಷರನ್ನು ಮಹಿಳೆಯರು ಇಷ್ಟಪಡುವುದು.

ಗಡ್ಡದಾರಿ ಪುರುಷರು ಹೆಚ್ಚು ಆತ್ಮವಿಶ್ವಾಸ ಹಾಗೂ ಬಲಿಷ್ಠರಾಗಿದ್ದಾರೆನ್ನುವ ಕಾರಣದಿಂದ ಮಹಿಳೆಯರು ಅವರ ಬಗ್ಗೆ ಹುಚ್ಚರಂತಾಗುತ್ತಾರೆ.

ಬಾಲಿವುಡ್ ನಲ್ಲಿ ಶಾಹೀದ್ ಕಪೂರ್ ನನ್ನು ಚಾಕಲೇಟ್ ಬಾಯ್ ಎಂದು ಕರೆಯಲಾಗುತ್ತಿತ್ತು. ಆತ ಸಂಪೂರ್ಣವಾಗಿ ಗಡ್ಡಮೀಸೆ ಬೋಳಿಸಿಕೊಂಡಿರುವುದೇ ಇದಕ್ಕೆ ಕಾರಣವಾಗಿತ್ತು. ಆದರೆ ಈಗ ಶಾಹೀದ್ ಕಪೂರ್ ಕೂಡ ಗಡ್ಡ ಬಿಡುತ್ತಿದ್ದಾನೆ.

ಪುರುಷರು ಗಡ್ಡ ಬಿಟ್ಟರೆ ಅದನ್ನು ಟ್ರಿಮ್ ಮಾಡಿಕೊಂಡು ಸರಿಯಾಗಿ ಇಟ್ಟುಕೊಂಡಿರಬೇಕು. ಇಲ್ಲವೆಂದಾದರೆ ಅದನ್ನು ನೋಡಲು ಅಸಹ್ಯವಾಗಿರುತ್ತದೆ.

ಗಡ್ಡದಲ್ಲಿ ಕೈಯಾಡಿಸುವುದೆಂದರೆ ಅದು ಒಂದು ರೀತಿಯ ವಿಶೇಷ ಅನುಭವ ಉಂಟುಮಾಡುತ್ತದೆ. ಇದಕ್ಕಾಗಿಯೇ ಮಹಿಳೆಯರು ಗಡ್ಡದಾರಿಗಳನ್ನು ಇಷ್ಟಪಡುವುದು.

Comments are closed.