ಮಂಗಳೂರು : ಮಹಿಳೆಯರು ಅನೇಕ ಗೊಂದಲ, ಸಮಸ್ಯೆಗಳಿಂದ ಬಳಲುತ್ತಾರೆ. ಇಂತಹ ಸಮಸ್ಯೆ ಪುರುಷರಿಗೆ ಎಂದೂ ಬರುವುದಿಲ್ಲ. ಹಾಗೆ ಆ ಸಮಸ್ಯೆ ಅವರಿಗೆ ಸರಿಯಾಗಿ ಅರ್ಥವೂ ಆಗುವುದಿಲ್ಲ. ಮಹಿಳೆಯರು ಎದುರಿಸುವ ಅಂತಹ ಸಮಸ್ಯೆಗಳು ಯಾವುವು ಅಂತಾ ಹೇಳ್ತೇವೆ ಕೇಳಿ.
ತಿಂಗಳ ತೊಂದರೆ : ಪ್ರತಿಯೊಬ್ಬ ಮಹಿಳೆ ಅನುಭವಿಸುವ ನೋವು, ಸಂಕಟ ಇದು. ಕಿರಿಕಿರಿ ಜೊತೆಗೆ ಪ್ಯಾಡ್ ಬಗ್ಗೆಯೂ ಅವರಿಗೆ ಸಮಸ್ಯೆ ಇರುತ್ತದೆ. ಪ್ಯಾಡನ್ನು ಪುರುಷರಿಗೆ ಕಾಣದ ಹಾಗೆ ಎಲ್ಲಿ ಇಡುವುದು..? ಬ್ಯಾಗ್ ತೆಗೆದುಬಿಟ್ಟರೆ ಎಂಬ ಗೊಂದಲ ಕಾಡುತ್ತದೆ.
ಸ್ತನ್ಯಪಾನ : ತಾಯಿಯಾಗುವುದು ಒಂದು ಸುಂದರ ಅನುಭವ. ಆದರೆ ಮಕ್ಕಳನ್ನು ಸಾಕಿ ಸಲಹುವುದು ಸುಲಭದ ಕೆಲಸವಲ್ಲ. ಹೊರಗಡೆ ಹೋದಾಗ, ಸೂಕ್ತವಲ್ಲದ ಸ್ಥಳದಲ್ಲಿ ಮಕ್ಕಳಿಗೆ ಹಸಿವಾಗಿಬಿಡುತ್ತದೆ. ಅಂತಹ ವೇಳೆ ಸ್ತನ್ಯಪಾನ ಮಾಡಬೇಕಾದ ಅನಿವಾರ್ಯತೆ ಬರುತ್ತದೆ.ಈ ಸಂಧರ್ಭದಲ್ಲಿ ಮಹಿಳೆಯ ನೋವು ಹೇಳಲು ಅಸಾಧ್ಯ
ಬಟ್ಟೆ : ಕೆಲವು ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆ ತೊಡುವುದು ಹಿತ ಎನಿಸಿದ್ರೆ ಮತ್ತೆ ಕೆಲವರಿಗೆ ಮಾಡರ್ನ್ ಬಟ್ಟೆ ಇಷ್ಟವಾಗುತ್ತದೆ. ಆದರೆ ತಮಗಿಷ್ಟವಾಗುವ ಉಡುಗೆ ಬಿಟ್ಟು, ಬೇರೆಯವರ ಇಷ್ಟಕ್ಕೆ ತಕ್ಕಂತೆ ಬಟ್ಟೆ ಧರಿಸಬೇಕಾಗುತ್ತದೆ.
ಮನೆ ಹಾಗೂ ಕಚೇರಿ : ಈಗ ಕೆಲಸಕ್ಕೆ ಹೋಗುವ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಅವರು ಮನೆ ಹಾಗೂ ಕಚೇರಿ ಎರಡನ್ನೂ ನಿಭಾಯಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ಮಾಡಬೇಕಾಗುತ್ತದೆ.
ಅವಳಿಗಾಗಿ ಸಮಯ ಇಲ್ಲ : ಪ್ರತಿಯೊಬ್ಬ ಮನುಷ್ಯ ತನಗಾಗಿ ಸ್ವಲ್ಪ ಸಮಯ ಇಟ್ಟುಕೊಂಡಿರುತ್ತಾನೆ. ಮಹಿಳೆಯರಿಗೆ ಮಾತ್ರ ಮನೆ, ಕಚೇರಿ, ಮಕ್ಕಳನ್ನು ನಿಭಾಯಿಸುವುದರಲ್ಲಿ ಅವರಿಗೆ ಸಮಯ ಸಿಗುವುದೇ ಇಲ್ಲ. ಇದರಿಂದ ಕಿರಿಕಿರಿಯುಂಟಾಗುತ್ತದೆ. ಮಹಿಳೆಯರ ಈ ಸಮಸ್ಯೆಯನ್ನು ಕಡಿಮೆ ಪುರುಷರು ಅರ್ಥ ಮಾಡಿಕೊಳ್ಳುತ್ತಾರೆ.
Comments are closed.