ರಿಯೋ ಡಿ ಜನೈರೋ ಆ.16: ರಿಯೋ ಒಲಿಂಪಿಕ್ಸ್ನಲ್ಲಿ ಪ್ರತಿದಿನ ಒಂದಲ್ಲಾ ಒಂದು ಹೊಸ ದಾಖಲೆಗಳು ಆಗುತ್ತಿವೆ. ಸೌದಿ ಅರೇಬಿಯಾದ ಮಹಿಳಾ ಸ್ಪರ್ಧಿ ಈ ದಾಖಲೆ ನಿರ್ಮಿಸಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಸೌದಿ ಅರೇಬಿಯಾದ ಕರೀಮನ್ ಅಬುಲ್ ಜದಾಯಲ್, ಫುಲ್ ಬಾಡಿ ಸೂಟ್ ಧರಿಸಿ 100 ಮೀಟರ್ ಓಟದಲ್ಲಿ ಪಾಲ್ಗೊಂಡಿದ್ದರು.
100 ಮೀಟರ್ ಸ್ಪರ್ಧೆಯಲ್ಲಿ 14.61 ಸೆಕೆಂಡಿನಲ್ಲಿ 7ನೇಯವಳಾಗಿ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಮೈ ತುಂಬ ಬಟ್ಟೆ ತೊಟ್ಟರೆ ಒಡಲು ಕಷ್ಟವಾಗುತ್ತೆ ಎನ್ನುವ ಸ್ಪರ್ಧಿಗಳ ಮಧ್ಯೆ ಈಕೆಯ ಸಾಧನೆ ದೊಡ್ಡದು.
ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾದ ಮಹಿಳೆಯೋರ್ವಳು ರಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿ ಅಲ್ಲಿನ ಜನರ ಮನ ಗೆದ್ದಿರುವ ಕರೀಮನ್ಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
Comments are closed.