__ಸೆಕ್ಸ್ ಪ್ರತಿಯೊಬ್ಬರಲ್ಲಿಯೂ ಕುತೂಹಲ ಕೆರಳಿಸುವ ವಿಷಯ. ಇದು ಪ್ರತಿಯೊಬ್ಬರಿಗೂ ಒಂದು ವಯಸ್ಸಿನಲ್ಲಿ ಅತ್ಯಗತ್ಯವಾಗಿ ಬೇಕೆಬೇಕು. ಆದರೆ ಭಾರತೀಯರಿಗೆ ಇದು ಮುಜುಗರ ಹಾಗೂ ಸಂಪ್ರದಾಯದ ವಿಷಯವಾದರೆ ಐರೋಪ್ಯ ದೇಶದವರಿಗೆ ಸರ್ವೆ ಸಾಮಾನ್ಯ ಸಂಗತಿ. ಸೆಕ್ಸ್ ಬಗ್ಗೆ ಒಂದೊಂದು ದೇಶದಲ್ಲೂ ಒಂದೊಂದು ಪರಿಕಲ್ಪನೆಯಿದೆ.
ಭಾರತದಂತ ದೇಶಗಳಲ್ಲಿ ಮಾಧ್ಯಮಗಳಾಗಲಿ, ಸ್ವಯಂಸೇವಾ ಸಂಸ್ಥೆಗಳಾಗಲಿ ಸೆಕ್ಸ್ ಬಗ್ಗೆ ಸರ್ವೆ ನಡೆಸಲು ಪ್ರಯಾಸ ಪಡಬೇಕಾಗುತ್ತದೆ. ಸುಶಿಕ್ಷಿತರು ಸಹ ತಮ್ಮ ವೈಯುಕ್ತಿಕ ಲೈಂಗಿಕ ಅನುಭವದ ಬಗ್ಗೆ ಹೇಳಲು ಹಿಂದೇಟು ಹಾಕುತ್ತಾರೆ. ಸಾಮಾನ್ಯವಾಗಿ ಇದು ವಿಶ್ವಾಸಾರ್ಹ ವಿಷಯವಲ್ಲ ಖಾಸಗಿ ಬದುಕಿಗೆ ಸಂಬಂಧಪಟ್ಟದ್ದು. ವಿಜ್ಞಾನಕ್ಕೆ ಸಮೀಪವಾದರೂ ಅದು ವೈದ್ಯರಿಗೆ ಸಂಬಂಧಪಟ್ಟದ್ದು.
ಅಮೆರಿಕ ಸೇರಿದಂತೆ ವಿವಿಧ ದೇಶಗಳ 18 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ 50 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಸಮೀಕ್ಷೆ ನಡೆಸಲಾಗಿತ್ತು. ಈ ವ್ಯಾಪಕ ಸಮೀಕ್ಷೆಯಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅದರ ವಿವರ ಈ ಕೆಳಕಂಡಂತಿದೆ.
ಸಮೀಕ್ಷೆಯಲ್ಲಿ ವ್ಯಕ್ತವಾದ ವಿವಿಧ ಅಭಿಪ್ರಾಯಗಳು ಈಗಿವೆ.
1) ಯಾರ ಜೊತೆ ನೀವು ಸೆಕ್ಸ್ ಮಾಡಲು ಬಯಸುತ್ತೀರಾ ?
ಉ:1) ಶೇ.2 ಮಂದಿ ವೇಶ್ಯೆಯರು
2)ಶೇ.9 ಪರಿಚಯವಿರುವವರು
3)ಶೇ. 53 ಧಿರ್ಘಾವಧಿ ಸಂಬಂಧವಿರುವವರೊಂದಿಗೆ,
4)ಶೇ.12 ಜನರು ಸ್ನೇಹಿತರೊಂದಿಗೆ ಅನುಕೂಲ ಪಡೆದುಕೊಂಡು
5)ಶೇ. 24 ಮಂದಿ ಸಂಗಾತಿಯ ಜೊತೆ ಎಂದು ಉತ್ತರ ನೀಡಿದ್ದಾರೆ.
2)ಎಷ್ಟು ದಿನಕ್ಕೊಮ್ಮೆ ಸೆಕ್ಸ್’ನಲ್ಲಿ ಪಾಲ್ಗೊಳ್ಳುತ್ತೀರಾ ?
ಉ: ಶೇ. 18 ಮಂದಿ ವರ್ಷಕ್ಕಿಂತ ಮೇಲ್ಪಟ್ಟು ದಿನಗಳಲ್ಲಿ,ಶೇ.8 ಮಂದಿ ವರ್ಷಕ್ಕೊಮ್ಮೆ,ಶೇ.28 ತಿಂಗಳಿಗೆ 2 ಬಾರಿ,ಶೇ.40 ಮಂದಿ ವಾರಕ್ಕೆ 3 ಬಾರಿ ಹಾಗೂ ಶೇ.6.5 ಮಂದಿ ವಾರಕ್ಕೆ 4 ಹಾಗೂ ಅದಕ್ಕಿಂತ ಹೆಚ್ಚು ಬಾರಿ ಎಂದು ಉತ್ತರ ನೀಡಿದ್ದಾರೆ.
3)ಸೆಕ್ಸ್’ಅನ್ನು ಯಾವ ರೀತಿ ಮಾಡುತ್ತೀರಾ ?(18ರಿಂದ 59 ವಯೋಮಾನದವರು)
ಉ:1)ಶೇ.86 ಮಂದಿ ಮಹಿಳೆಯರು ಹಾಗೂ ಶೇ.80 ಮಂದಿ ಪುರುಷರು ಯೋನಿ ಹಾಗೂ ಶಿಶ್ನವನ್ನು ಅವಲಂಬಿಸುತ್ತಾರೆ.
2)ಶೇ.67 ಮಂದಿ ಮಹಿಳೆಯರು ಹಾಗೂ ಶೇ.80 ಮಂದಿ ಪುರುಷರು ಹಸ್ತ ಮೈಥುನ ಅವಲಂಬಿಸುತ್ತಾರೆ.
3) ಶೇ.3.5 ಮಹಿಳೆಯರು ಹಾಗೂ ಶೇ. 9 ಪುರುಷರು ಅಲೈಂಗಿಕ ನೈಸರ್ಗಿಕ ವಿರುದ್ಧವಾದ ಕ್ರಿಯೆಯಲ್ಲಿ ತೊಡಗುತ್ತಾರೆ.
4) ಎಷ್ಟು ಸಮಯ ಸೆಕ್ಸ್’ನಲ್ಲಿ ತೊಡಗಿಕೊಳ್ಳುತ್ತೀರಾ ?
ಉ:1) ಸಲಿಂಗಕಾಮಿ ಮಹಿಳೆಯಾದರೆ 30 ರಿಂದ 45 ನಿಮಿಷ
2)ಸಲಿಂಗಕಾಮಿ ಪುರುಷನಾದರೆ 15ರಿಂದ 30 ನಿಮಿಷ
3)ದಂಪತಿಗಳಂದರೆ 15ರಿಂದ 30 ನಿಮಿಷ
5) ಸುಳ್ಳು ಸುಳ್ಳೇ ಉನ್ಮಾದ ಸ್ಥಿತಿ ತೋರ್ಪಡಿಸಿಕೊಳ್ಳೋದು ಯಾರು ಹೆಚ್ಚು?
ಉ: ಶೇ.25 ಪುರುಷ ಹಾಗೂ ಶೇ.50 ಮಹಿಳೆ
ಕೃಪೆ: ಬಿಬಿಸಿ
Comments are closed.