ಕರಾವಳಿ

ಸರಕಾರಿ ಶಾಲೆಗಳ ಅಭಿವೃದ್ಧಿಯೇ ಸರ್ಕಾರದ ಮುಖ್ಯ ಆದ್ಯತೆ: ಪ್ರಮೋದ್ ಮಧ್ವರಾಜ್

Pinterest LinkedIn Tumblr

ಉಡುಪಿ: ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿಗೆ 1.31 ಲಕ್ಷರೂ. ಅನುದಾನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಮೀನುಗಾರಿಕೆ ಮತ್ತು ಯುವಜನ ಸೇವಾ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರಿಂದು ಬ್ರಹ್ಮಾವರ ಬೋರ್ಡ್ ಹಸ್ಕೂಲ್ ನಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಿಂದ ರಚಿಸಲ್ಪಟ್ಟ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

Brahmavara_School_Programme (2) Brahmavara_School_Programme (1)

ಶಾಲೆಗಳ ಬೇಡಿಕೆಗಳು ನಿರಂತರವಾಗಿದ್ದು, ಎನ್ ಎಸ್ ಎಸ್ ನ್ನು ಪ್ರೌಢಶಾಲಾ ವಿಭಾಗದಿಂದ ಆರಂಭಿಸಲು ಯೋಚನೆ ಮಾಡಲಾಗುತ್ತಿದೆ. ಶಾಲಾ ಮೈದಾನವನ್ನು ಅಭಿವೃದ್ಧಿ ಪಡಿಸಲು ಅಗತ್ಯ ನೆರವನ್ನು ಜಿಲ್ಲಾ ಯುವಜನ ಮತ್ತು ಕ್ರೀಡಾಧಿಕಾರಿಯ ಮಾರ್ಗದರ್ಶನದಲ್ಲಿ ಪಡೆದುಕೊಳ್ಳಿ ಎಂದು ಸಚಿವರು ಶಿಕ್ಷಕರಿಗೆ ಸೂಚನೆ ನೀಡಿದರು. ವಿಭಾಗಮಟ್ಟದ ಕ್ರೀಡಾಕೂಟ ಇದೇ ಶಾಲೆಯಲ್ಲಿ ನಡೆಯಲಿದ್ದು, ಅತ್ಯುತ್ತಮವಾಗಿ ಕ್ರೀಡಾಕೂಟವನ್ನು ಸಂಘಟಿಸಿ ಎಂದರು.

ಇದೇ ಸಂದರ್ಭದಲ್ಲಿ ಜಾವಲಿನ್ ಥ್ರೋ ದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 8 ನೇ ಸ್ಥಾನ ಪಡೆದಿರುವ ಕುಮಾರಿ ಕರೀಶ್ಮಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಕುಸುಮಾ ಪೂಜಾರಿ, ಎಸ್ ಡಿ ಎಂ ಉಪಾಧ್ಯಕ್ಷ ಸದಾಶಿವಮೂರ್ತಿ, ಪ್ರಾಂಶುಪಾಲ ಮಂಜುನಾಥ್ ಭಟ್, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ ಆರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪದ್ಮಾವತಿ ಭಟ್ ಸಮಾರಂಭದಲ್ಲಿದ್ದರು.

ಶಾಲಾ ಬೇಡಿಕೆಗಳ ಬಗ್ಗೆ ಈ ಸಂದರ್ಭದಲ್ಲಿ ಸಚಿವರು ಶಿಕ್ಷಕರಿಂದ ಮನವಿ ಸ್ವೀಕರಿಸಿದರು.

Comments are closed.