ಉಡುಪಿ: ನಾಪತ್ತೆಯಾಗಿದ್ದ ಉಡುಪಿಯ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಕಟ್ಟಡದ ಮಾಲಕ, ವಿದೇಶಿ ಉದ್ಯಮಿ ಕೆ. ಭಾಸ್ಕರ ಶೆಟ್ಟಿ (52) ಕೊಲೆಯಾಗಿದ್ದು, ಅವರ ಶವವನ್ನು ಸುಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಗೆ ಸಂಬಂಧಿಸಿದಂತೆ ಭಾಸ್ಕರ ಶೆಟ್ಟಿಯವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಪೊಲೀಸ್ ವಶದಲ್ಲಿದ್ದು, ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
ಜುಲೈ 28 ರಿಂದ ಕಾಣೆಯಾಗಿರುವ ಕುರಿತು ಭಾಸ್ಕರ ಶೆಟ್ಟಿ ಅವರ ತಾಯಿ ಗುಲಾಬಿ ಶೆಡ್ತಿ ಮಣಿಪಾಲ ಠಾಣೆಗೆ ದೂರು ನೀಡಿದ್ದರು. ಜು. 28ರ ಮಧ್ಯಾಹ್ನ ಮನೆಗೆ ಹೋಗುವುದಾಗಿ ತಿಳಿಸಿ ಹೊಟೇಲಿನಿಂದ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಕೌಟುಂಬಿಕ ಆಸ್ತಿ ಕಲಹವಿದ್ದು, ಇದೇ ಕಾರಣದಿಂದ ಅವರು ನಾಪತ್ತೆಯಾಗಿದ್ದರು ಎಂದು ಹೇಳಲಾಗುತ್ತಿತ್ತು.
ಭಾಸ್ಕರ ಶೆಟ್ಟಿಯವರ ಕೊಲೆಯನ್ನು ಅವರ ಬಂಧುಗಳು ಖಚಿತ ಪಡಿಸಿದ್ದು, ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿರಿ:
ಉಡುಪಿಯ ಉದ್ಯಮಿ ನಾಪತ್ತೆ: ಅಪಹರಣದ ಬಗ್ಗೆ ತಾಯಿಯಿಂದ ಪೊಲೀಸರಿಗೆ ದೂರು
ಹೋಮಕುಂಡಕ್ಕೆ ಹಾಕಿ ಸುಟ್ಟರೇ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು? ಮಡದಿ, ಮಗ, ಗೆಳೆಯ ಕಟುಕರಾದರು..!
Comments are closed.