ಕಾಸರಗೋಡು, ಆ.06: ಐಸಿಸ್ ಉಗ್ರವಾದಿ ಸಂಘಟನೆ ಜೊತೆ ಸಖ್ಯ ಇರಿಸಿಕೊಂಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬಿಹಾರ ಮೂಲದ ಯಾಸ್ಮೀನ್ ಅಹ್ಮದ್‌ಗೆ ಕಾಸರಗೋಡು ವಿಭಾಗೀಯ ನ್ಯಾಯಾಲಯವು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಯಾಸ್ಮೀನ್‌ಳನ್ನು ಪೊಲೀಸರು ವಶಕ್ಕೆ ಪಡೆಯುವುದರೊಂದಿಗೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾವ ನಿರೀಕ್ಷೆಯಿದೆ.
ಸದ್ಯ ಯುಎಪಿಎ ಹೊರಿಸಲಾದ ಯಾಸ್ಮೀನ್‌ಳನ್ನು ನಿನ್ನೆ ವಿಭಾಗೀಯ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ವಿಚಾರಣೆಯ ನಂತರ ಯಾಸ್ಮೀನ್‌ಳನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ದೇಶದಿಂದ ತೆರಳಲೆತ್ನಿಸುತ್ತಿದ್ದ ವೇಳೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತಳಾಗಿದ್ದ ಯಾಸ್ಮೀನ್‌ಳನ್ನು ಬಳಿಕ ಕಾಸರಗೋಡು ಪೊಲೀಸರಿಗೆ ನೀಡಲಾಗಿತ್ತು.
ಅಲ್ಲದೆ ನ್ಯಾಯಾಂಗ ಬಂಧನಕ್ಕೆ ಯಾಸ್ಮೀನ್ ಒಳಗಾಗಿದ್ದಳು. ಜಿಲ್ಲೆಯ ಪಡನ್ನಾ, ತೃಕ್ಕರಿಪುರದಲ್ಲಿ ನಾಪತ್ತೆಯಾಗಿದ್ದ ತಂಡವನ್ನು ಸೇರಲು ಕಾಬೂಲ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಯಾಸ್ಮೀನ್ ಬಂಧನಕ್ಕೊಳಗಾಗಿದ್ದಳು. ಈಕೆಗೆ ತೃಕ್ಕರಿಪುರದಿಂದ ನಾಪತ್ತೆಯಾಗಿರುವ ಅಬ್ದುಲ್ ರಾಶೀದ್ ಜೊತೆ ನಿಟಕ ಸಂಪರ್ಕ ಹೊಂದಿತ್ತು ಎನ್ನಲಾಗಿದೆ. ಮೊನ್ನೆ ದೇಶದ ತೊರೆದವರು ನಕಲಿ ಪಾಸ್‌ಪೋರ್ಟ್ ಬಳಸಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಯಾಸ್ಮೀನ್ ಬಳಿಯಿಂದ ಎರಡು ನಕಲಿ ಪಾಸ್‌ಪೋರ್ಟ್ ವಶಕ್ಕೆ ಪಡೆದುಕೊಂಡಿರುವುದು ಇದಕ್ಕೆ ಪುಷ್ಠಿ ನೀಡಿದೆ.
Comments are closed.