ಕುಂದಾಪುರ: ಭೂಕಂದಾಯ ಕಾಯಿದೆ 1964 ಅನ್ವಯ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದು, 94ಸಿ ಅರ್ಜಿದಾರರಿಗೆ ಕೂಡಲೇ ಹಕ್ಕು ಪತ್ರ ಕೊಡಲು ಒತ್ತಾಯಿಸಿ ಬೈಂದೂರು ವಿಶೇಷ ತಹಶೀಲ್ದಾರ್ ಕಛೇರಿ ಎದುರು ಬೃಹತ್ ಪ್ರತಿಭಟನಾ ಮುಷ್ಕರ ನಡೆಯಿತು.

ಬೈಂದೂರು ವಿಶೇಷ ಉಪತಹಶೀಲ್ದಾರ್ ಆದ ಶಂಕರ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ರಾಜ್ಯ ಅಧ್ಯಕ್ಷರಾದ ಕಾಂ. ನಿತ್ಯಾನಂದಸ್ವಾಮಿ, ಕೃಷಿಕೂಲಿಕಾರರ ಸಂಘದ ಮುಖಂಡರಾದ ವೆಂಕಟೇಶ ಕೋಣಿ, ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ, ರಾಜೀವ ಪಡುಕೋಣೆ , ಗಣೇಶ ತೊಂಡೆಮಕ್ಕಿ, ನಾಗರತ್ನ ನಾಡ, ಶೀಲಾವತಿ, ಮುತ್ತ ಮಾರ್ಕೊಡು ಸ್ಥಳೀಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಬಲ ಕೊಠಾರಿ ಉಪಸ್ಥಿತರಿದ್ದರು.
Comments are closed.