__ಮಕ್ಕಳು ಆಟೋಟದಲ್ಲಿ ತುಂಬಾ ಚುರುಕಾಗಿದ್ದಾರೆ. ಓದಿನಲ್ಲಿ ಮಾತ್ರ ಹಿಂದೆ ಬೀಳುತ್ತದ್ದಾರೆ. ಇದಕ್ಕೆ ಕಾರಣವೇನೆಂದು ತಿಳಿಯುತ್ತಿಲ್ಲ ಎನ್ನುವುದು ಕೆಲವು ಪೋಷಕರ ದೂರು. ಮಕ್ಕಳ ಮೆದುಳಿನ ಬೆಳವಣಿಗೆಯಲ್ಲಿ ಅವರು ತಿನ್ನುವಂತಹ ಆಹಾರವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅವರು ತಿನ್ನುವಂತಹ ಪೋಷಕಾಂಶಗಳಿರುವ ಆಹಾರಗಳಿಂದ ಮೆದುಳಿನ ಬೆಳವಣಿಗೆಯಾಗುವುದು. ಮಕ್ಕಳ ಬುದ್ಧಿ ಶಕ್ತಿ ಹೆಚ್ಚಲು ನೀಡಬೇಕಾದ ಆಹಾರಗಳು.
ವಿದ್ಯಾಭ್ಯಾಸದಲ್ಲಿ ಮಕ್ಕಳು ಅಗ್ರ ಸ್ಥಾನಕ್ಕೇರಲು ಮತ್ತು ಕೆಳಮಟ್ಟಕ್ಕಿಳಿಯಲು ಅವರು ತಿನ್ನುವಂತಹ ಆಹಾರಗಳೇ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎನ್ನುವುದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು.ಅಧ್ಯಯನಗಳಿಂದಲೂ ಮಕ್ಕಳು ತಿನ್ನುವಂತಹ ಆಹಾರವು ಅವರ ಕಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ತಿಳಿದುಬಂದಿದೆ. ಶಾಲೆಗೆ ಹೋಗುವಂತಹ ಮಕ್ಕಳಿಗೆ ಯಾವ ರೀತಿಯ ಆಹಾರವನ್ನು ನೀಡಬಹುದು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದರ ಬಗ್ಗೆ ತಿಳಿಯಲು ಮಕ್ಕಳ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.
ಶಾಲೆಗೆ ಹೋಗುವ ಮಕ್ಕಳು ಮೊಟ್ಟೆ ತಿಂದರೆ ಮೊಟ್ಟೆಯಲ್ಲಿರುವ ಪೋಷಕಾಂಶಗಳು ಮತ್ತು ಪ್ರೋಟೀನ್ ಓದಿನ ಕಡೆ ಹೆಚ್ಚಿನ ಗಮನಹರಿಸುವಂತೆ ಮಾಡಲಿದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.
ಎಲೆಮುಸುಕಿನ ಕೋಸುಗಡ್ಡೆ ಮತ್ತು ಪಾಲಕ್ ಸೊಪ್ಪಿನಲ್ಲಿ ಫೊಲೆಟ್ ಹಾಗೂ ಆಯಂಟಿ ಆಕ್ಸಿಟೆಂಡ್ಗಳಿವೆ. ಈ ಎಲೆಗಳು ಮೆದುಳಿನ ಬೆಳವಣಿಗೆ ಮತ್ತು ಕೋಶಗಳ ಅಭಿವೃದ್ಧಿಗೆ ನೆರವಾಗುತ್ತದೆ.
ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಸಮೃದ್ಧವಾಗಿ ಇವೆ. ಇವುಗಳು ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಕರಿಸುತ್ತವೆ. ಅಲ್ಲದೇ ಇದು ಜೀರ್ಣ ಕ್ರಿಯೆ ಚೆನ್ನಾಗಿ ನಡೆಯುವಂತೆ ಪ್ರೋತ್ಸಾಹಿಸಿ, ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗಾಗಿ ಕಡಿಮೆ ಕಬ್ಬಿಣಾಂಶವಿರುವ ಮೊಸರಿಗೆ ಅವುಗಳಿಗೆ ತಾಜಾ ಆದ ಅಥವಾ ಒಣ ಹಣ್ಣುಗಳನ್ನು ಬೆರೆಸಿ ತಿನ್ನಲು ಕೊಡಿ.
ವಾಲ್ ನಟ್‍ಗಳು ಒಂದು ಅತ್ಯುತ್ತಮವಾದ ಪ್ರೋಟೀನ್ ಉಪಾಹಾರವಾಗಿ (ಸ್ನ್ಯಾಕ್ಸ್) ಸಹಾಯಕ್ಕೆ ಬರುತ್ತವೆ. ಹಾಗಾಗಿ ಇದನ್ನು ನಿಮ್ಮ ಮಗುವಿನ ಊಟದ ಡಬ್ಬಿಯಲ್ಲಿ ತುಂಬಲು ಯಾವುದೇ ಅಡ್ಡಿಯಿಲ್ಲ. ಇವುಗಳಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳು ಇವೆ. ಈ ಒಮೆಗಾವು ಮೆದುಳಿನ ಕಾರ್ಯ ವೈಖರಿ, ಕಾಯಿಲೆ ಮತ್ತು ಖಿನ್ನತೆಯನ್ನು ಹೊಡೆದೋಡಿಸುತ್ತವೆ. ಹಾಗಾಗಿ ವಾಲ್ ನಟ್ ಅನ್ನು ಕತ್ತರಿಸಿ ಮತ್ತು ಅವುಗಳನ್ನು ಗಂಜಿಯಂತೆಯೋ, ಬೇಯಿಸಿಯೋ ಅಥವಾ ಸಲಾಡ್ ಮಾದರಿಯಲ್ಲಿ ಬೇಕಾದರು ತಯಾರಿಸಿ ತಿನ್ನಬಹುದು.
ಇದರಲ್ಲಿ ಒಮೆಗಾ 3 ಕೊಬ್ಬಿನ ಆಯಸಿಡ್ ಮತ್ತು ವಿಟಮಿನ್ ಡಿ ಇದೆ. ಮೀನಿನಲ್ಲಿರುವ ಪೋಷಕಾಂಶಗಳು ಜ್ಞಾಪಕಶಕ್ತಿ ಕಡಿಮೆಯಾಗುವುದನ್ನು ತಪ್ಪಿಸುವುದು ಮತ್ತು ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು.
ಹೈನು ಉತ್ಪನ್ನಗಳಲ್ಲಿ ದೊರೆಯುವ ಕ್ಯಾಲ್ಸಿಯಂ ಮತ್ತು ಪ್ರೊಟೀನ್‍ಗಳು ಮೆದುಳು ಮತ್ತು ದೇಹಕ್ಕೆ ಅಗತ್ಯವಾದ ಇಂಧನವನ್ನು ಒದಗಿಸುತ್ತವೆ,ಅದರಲ್ಲೂ ಹಾಲು ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ಪ್ರೊಟೀನ್‍ಗಳು ಮೆದುಳಿನ ಜೀವಕೋಶಗಳ ನಿರ್ಮಾಣಕ್ಕೆ ಸಹಕರಿಸುತ್ತವೆ. ಅಲ್ಲದೆ ಇದರಲ್ಲಿರುವ ಕ್ಯಾಲ್ಸಿಯಂ ಮಕ್ಕಳ ಮೂಳೆ ಮತ್ತು ಹಲ್ಲುಗಳನ್ನು ಸದೃಢವಾಗಿ ಇಡಲು ನೆರವಾಗುತ್ತವೆ.
ಓಟ್ ಮೀಲ್ನಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಇದೆ. ಮಕ್ಕಳ ಮೆದುಳು ಮತ್ತು ಹೃದಯಕ್ಕೆ ಇದು ಒಳ್ಳೆಯದು. ಓಟ್ ಮೀಲ್ ತಿನ್ನುವ ಮಕ್ಕಳು ಬೆಳಗ್ಗಿನ ತರಗತಿಗಳಲ್ಲಿ ಉತ್ತಮ ಫಲಿತಾಂಶ ತೋರುತ್ತಾರೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.
Comments are closed.