ಕರಾವಳಿ

ಸಿದ್ದಾಪುರ: ಶಿಕ್ಷಕರ ವರ್ಗಾವಣೆ ವಿರೋಧಿಸಿ ಮೂರನೇ ದಿನವೂ ಪೋಷಕರ ಪ್ರತಿಭಟನೆ; ಶುಕ್ರವಾರ ಸಿದ್ದಾಪುರ ಬಂದ್ ಸಾಧ್ಯತೆ

Pinterest LinkedIn Tumblr

ಕುಂದಾಪುರ: ಸಿದ್ದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 220 ಮಕ್ಕಳಿದರೂ ಹೆಚ್ಚುವರಿಯಲ್ಲಿ ಶಿಕ್ಷಕರನ್ನು ವರ್ಗಾವಣೆಗೊಳಿಸಿರುವುದನ್ನು ಖಂಡಿಸಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕ ಪ್ರತಿಭಟನೆ ಮೂರು ದಿನಕ್ಕೆ ಕಾಲಿಟ್ಟದೆ. ಅಧಿಕಾರಿಗಳ ವರ್ತನೆ ಮಾತ್ರ ಪೋಷಕರನ್ನು ವಂಚಿಸುವ ಚೆಲ್ಲಾಟ ಆಡುವಂತಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

Siddapura_School Childrens_Protest (1) Siddapura_School Childrens_Protest (2) Siddapura_School Childrens_Protest (3) Siddapura_School Childrens_Protest (4) Siddapura_School Childrens_Protest (5) Siddapura_School Childrens_Protest (6) Siddapura_School Childrens_Protest (7) Siddapura_School Childrens_Protest (8) Siddapura_School Childrens_Protest (9) Siddapura_School Childrens_Protest (10) Siddapura_School Childrens_Protest (11) Siddapura_School Childrens_Protest (12) Siddapura_School Childrens_Protest (13)

ಹೆಚ್ಚುವರಿಯಲ್ಲಿ ಶಿಕ್ಷಕರನ್ನು ವರ್ಗಾವಣೆಗೊಳಿಸಿದರೆ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ಆತಂಕದಿಂದ ಕಳೆದ ಮೂರು ದಿನಗಳಿಂದ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೆಲಪೊಂದು ವ್ಯಕ್ತಿಗಳು ಮಕ್ಕಳ ಬಗ್ಗೆ ಬಹಳ ಕಾಳಜಿ ಎನ್ನುವ ರೀತಿಯಲ್ಲಿ ಬಿಂಬಿಸುದಕ್ಕಾಗಿ ಪ್ರಚಾರಕ್ಕಾಗಿ ಹತೋರೆಯುವ ರೀತಿಯಲ್ಲಿ ಕಂಡು ಬರುತ್ತಿದೆ. ಇನ್ನೂ ಕೆಲವರು ಪ್ರತಿಭಟನೆ ನಡೆಸಿದವರು ನಾವು. ನಮ್ಮ ಹೆಸರು ಮಾಧ್ಯಮಗಳಲ್ಲಿ ಬರಲ್ಲಿಲ್ಲ. ಬೇರೆಲ್ಲರ ಹೆಸರು ಬಂದಿದೆ ಎಂದು ಗೋಣಗುತ್ತಿದ್ದರು. ಅಧಿಕಾರಿಗಳು ಮಾತ್ರ ಯಾವುದೋ ಒಂದು ಒತ್ತಡಗಳಿಗೆ ಒಳಗಾದ ರೀತಿಯಲ್ಲಿ ವರ್ತಿಸುತ್ತಿದ್ದು, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿಯುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ, ಅಧಿಕಾರಿಗಳ ವರ್ತನೆ ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ಕಂಡು ಬರುತ್ತಿದೆ ಎಂದು ಪೋಷಕರು ಹೇಳುತ್ತಾರೆ. ವಿದ್ಯಾರ್ಥಿಗಳು, ಪೋಷಕರು, ಎಸ್‌ಡಿ‌ಎಂಸಿಯವರು ಹಾಗೂ ಸಾರ್ವಜನಿಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಪ್ರಥಮ ದಿನ ಶಾಲೆಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಎರಡನೇ ದಿನ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಮೂರನೇ ದಿನವಾದ ಇಂದು ಪ್ರತಿಭಟನೆಯು ಉಗ್ರರೂಪ ತಳೆದಿದೆ.

ಶಾಲೆಗೆ ಬೀಗ ಜಡಿದು ಪ್ರತಿಭಟನೆ: ಮೂರನೇ ದಿನವಾದ ಆ.೪ರಂದು ಪ್ರತಿಭಟನೆಯು ಉಗ್ರರೂಪ ತಳೆದಿದೆ. ವಿದ್ಯಾರ್ಥಿಗಳು, ಪೋಷಕರು, ಎಸ್‌ಡಿ‌ಎಂಸಿಯವರು ಹಾಗೂ ಸಾರ್ವಜನಿಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಶಾಲೆಗೆ ಬೀಗ ಜಡಿದ್ದು, ಶಾಲೆಯಿಂದ ಸಿದ್ದಾಪುರ ಪೇಟೆಯ ತನಕ ಪ್ರತಿಭಟನೆ ಮೆರವಣಿಗೆ ನಡೆಸಿ, ಶಿಕ್ಷಣಾಧಿಕಾರಿಗಳ ವಿರೂಧ ಘೋಷಣೆ ಕೂಗಿದರು. ಪ್ರತಭಟನೆ ಸ್ಥಳಕ್ಕೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಬರುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯ ಹಾಲಾಡಿ ತಾರನಾಥ ಶೆಟ್ಟಿ, ತಾ.ಪಂ. ಸದಸ್ಯ ಎಸ್.ಕೆ. ವಾಸುದೇವ ಪೈ, ಸಿದ್ದಾಪುರ ಗ್ರಾ. ಪಂ. ಉಪಾಧ್ಯಕ್ಷ ಭರತ್ ಕಾಮತ್, ಸದಸ್ಯರಾದ ಕೃಷ್ಣ ಪೂಜಾರಿ, ಗೋಪಾಲ ಶೆಟ್ಟಿ, ಶೇಖರ ಕುಲಾಲ, ಪ್ರದೀಪ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಕುಲಾಲ ಕೂಡ್ಗಿ, ಎಸ್.ಡಿ.ಎಂ.ಸಿ ಸದಸ್ಯರು, ಊರಿನ ಪ್ರಮುಖರಾದ ಗೋಪಾಲ ಕಾಂಚನ್, ಭಾಸ್ಕರ ಶೆಟ್ಟಿ, ಭೋಜ ಶೆಟ್ಟಿ, ಎಚ್. ಸುಧಾಕರ ಶೆಟ್ಟಿ, ಶಾಲಾ ಮಕ್ಕಳು ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಶುಕ್ರವಾರ ಬಂದ್ ಸಾಧ್ಯತೆ: ಪ್ರತಿಭಟನಾಕಾರರ ಬೇಡಿಕೆ ಈಡೇರದಿದ್ದಲ್ಲಿ ಶುಕ್ರವಾರ ಬಂದ್ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

Comments are closed.