ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಮಹಾಮಾರಿ ಡೆಂಗ್ಯೂ. ಇದು ಹರಡುವ ವೈರಸ್ ಗಳು ಲಕ್ಷಾಂತರ ಮಂದಿಯನ್ನು ಏಕಕಾಲದಲ್ಲಿ ಬಲಿತೆಗೆದುಕೊಳ್ಳುವಷ್ಟು ಕ್ರೂರವಾಗಿವೆ.
ಈ ರೋಗದ ಸಾಮಾನ್ಯ ಲಕ್ಷಣಗಳು: ಜ್ವರ, ತೀವ್ರ ತಲೆನೋವು, ದೇಹದ ನೋವು. ಕಣ್ಣಿನ ನೋವು, ಸ್ನಾಯು ಅಥವಾ ಮೂಳೆಗಳಲ್ಲಿ ನೋವು, ಚರ್ಮದ ಮೇಲೆ ಗುಳ್ಳೆಗಳು, ಹಾಗೂ ಸಣ್ಣ ಪ್ರಮಾಣದಲ್ಲಿ ರಕ್ತಸ್ರಾವ ವುಂಟಾಗುತ್ತದೆ.
ಡೆಂಗ್ಯೂ ಖಾಯಲೆಗೆ ಯಾವುದೇ ನಿರ್ಧಿಷ್ಟ ಔಷಧಗಳಿಲ್ಲ. ಆದರೆ ಆರಂಭಿಕ ಹಂತದಲ್ಲಿಯೇ ಈ ಲಕ್ಷಣಗಳನ್ನು ಗುರುತಿಸಿದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಖಾಯಿಲೆ ಉಲ್ಬಣವಾಗುವುದನ್ನು ತಪ್ಪಿಸಬಹುದು. ಇದಕ್ಕೆ ಯಾವುದೇ ನಿರ್ಧಿಷ್ಟ ಔಷಧಗಳು ಇಲ್ಲದೇ ಇದ್ದರೂ ಕೂಡಾ ಮನೆಯಲ್ಲಿಯೇ ಈ ರೋಗ ತಡೆಗಟ್ಟಲು ಮದ್ದುಗಳಿವೆ ಅವು ಇಲ್ಲಿವೆ ನೋಡಿ.
ಪಪ್ಪಾಯ ಎಲೆಗಳು: ಪಪ್ಪಾಯ ಎಲೆಗಳನ್ನು ಜಜ್ಜಿ ಒಂದು ಶುದ್ಧವಾದ ಬಟ್ಟೆಯಿಂದ ಹೀಮಡಿ ತೆಗೆದು ಅದರ ರಸವನ್ನು ಸೇವಿಸುವುದರಿಂದ ಡೆಂಗ್ಯೂ ಜ್ವರದ ಪ್ರಮಾಣವನ್ನುತಗ್ಗಿಸಬಹುದು.
ತುಳಸಿ ಎಲೆಗಳು: ತುಳಸಿ ಸಕಲ ರೋಗಗಳಿಗೆ ರಾಮಬಾಣ.ತುಳಸಿಯನ್ನು ಅಗಿದು ತಿನ್ನುವುದರಿಂದ ಅಥವಾ ತುಳಸಿ ಎಲೆಗಳನ್ನು ಕುದಿಸಿದ ನೀರನ್ನು ಕುಡಿಯುವುದರಿಂದ ಈ ರೋಗವನ್ನು ತಡೆಯಬಹುದು.
ಬೇವಿನ ಎಲೆಗಳು: ಬೇವಿನ ಎಲೆಗಳನ್ನು ಕುದಿಸಿ ಅದರ ನೀರನ್ನು ಕುಡಿಯುವುದರಿಂದ ದೇಹದಲ್ಲಿ ರೋಗನಿರೋದಕ ಶಕ್ತಿ ಹೆಚ್ಚಲು ಸಹಾಯಕವಾಗಿದೆ.
ಮೆಂತೆ ಸೊಪ್ಪು: ಮೆಂತೆ ಸೊಪ್ಪು ಅಥವಾ ಮೆಂತೆ ಪುಡಿಯನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ಡೆಂಗ್ಯೂ ಜ್ವರವನ್ನು ನಿಯಂತ್ರಣದಲ್ಲಿಡಬಹುದು.
ಕಿತ್ತಳೆ ರಸ: ಕಿತ್ತಳೆ ರಸವನ್ನು ಸೇವಿಸುವುದರಿಂದ ಡೆಂಗ್ಯೂ ಗೆ ಕಾರಣವಾದ ವೈರಸ್ ಗಳು ದೇಹದಲ್ಲಿ ಬೆಳೆಯುವು ಪ್ರಮಾಣವನ್ನು ಕಡಿಮೆ ಮಾಡಬಹುದು.
ಅರಿಶಿಣ: ಅರಿಶಿಣವನ್ನು ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಚಿಕಿತ್ಸೆ ವೇಗವಾಗಿ ಫಲಕಾರಿಯಾಗಲು ಸಹಾಯವಾಗುತ್ತದೆ.


Comments are closed.