ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಅಕೌಂಟ್ ಹ್ಯಾಕ್ ಆಗೋದು ಆಶ್ಚರ್ಯವೇನಲ್ಲ. ಆದ್ರೆ ಈ ಬಾರಿ ಹ್ಯಾಕರ್‍ಗಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಕೌಂಟನ್ನೂ ಬಿಟ್ಟಿಲ್ಲ.
ಕಳೆದ ರಾತ್ರಿ ರಜನಿಕಾಂತ್ ಅವರ @superstarrajini ಟ್ವಿಟ್ಟರ್ ಖಾತೆಯಿಂದ ರಜನಿಕಾಂತ್ #HittoKill ಎಂದು ಟ್ವೀಟ್ ಮಾಡಲಾಗಿದ್ದು ಇದನ್ನು ನೋಡಿದ ರಜನಿ ಅಭಿಮಾನಿಗಳು ಶಾಕ್ ಆಗಿದ್ರು. ಬಳಿಕ ಟೆಕ್ಕಿಯೊಬ್ಬ ಅವರ ಖಾತೆಯನ್ನ ಹ್ಯಾಕ್ ಮಾಡಿದ್ದ ಅಂತ ಗೊತ್ತಾಗಿದೆ.
ಅಕೌಂಟ್ ಹ್ಯಾಕ್ ಆದ ಕೆಲವು ಗಂಟೆಗಳ ನಂತರ ರಜನಿಕಾಂತ್ ಅವರ ಮಗಳು ಐಶ್ವರ್ಯಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಪ್ಪನ ಅಕೌಂಟ್ ಹ್ಯಾಕ್ ಆಗಿತ್ತು. ಈಗ ರಿಟ್ರೀವ್ ಮಾಡಲಾಗಿದೆ. ಧನ್ಯವಾದ #AllIsWell ಅಂತ ಹೇಳಿದ್ದಾರೆ.
2013ರ ಫೆಬ್ರವರಿಯಲ್ಲಿ ಟ್ವಿಟ್ಟರ್ ಖಾತೆ ತೆರೆದ ರಜನಿಕಾಂತ್ ಅವರಿಗೆ ಸದ್ಯಕ್ಕೆ 30 ಲಕ್ಷಕ್ಕೂ ಹೆಚ್ಚು ಫಾಲೋವರ್‍ಗಳಿದ್ದಾರೆ. ಆದ್ರೆ ರಜನಿ ಹೆಚ್ಚಾಗಿ ಟ್ವಿಟ್ಟರ್ ಬಳಸಲ್ಲ. ಇಲ್ಲಿಯವರೆಗೂ 29 ಟ್ವೀಟ್‍ಗಳನ್ನ ಮಾಡಿದ್ದಾರೆ.
ರಜನಿಕಾಂತ್ ಅವರ ಅಕೌಂಟ್ ಹ್ಯಾಕ್ ಮಾಡಿದ ಟೆಕ್ಕಿಯ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
Comments are closed.