ಉಡುಪಿ: ಕೊಂಕಣ ರೈಲ್ವೇಯ ಭಟ್ಕಳ ರೈಲು ನಿಲ್ದಾಣದ ಪ್ರಯಾಣಿಕರು ಕುಳಿತುಕೊಳ್ಳುವ ಸೀಟಿನ ಮೇಲೆ ಬ್ಯಾಗ್ ಹಾಗೂ ಹೊಸದಾಗಿ ಖರೀಧಿಸಿದ ಐಫೋನ್ 6 ಬಿಟ್ಟು ಹೋಗಿರುವನ್ನು ಪತ್ತೆ ಹಚ್ಚಿದ ರೈಲ್ವೇ ಪೊಲೀಸರು ಮೊಬೈಲ್ ಹಾಗೂ ಬ್ಯಾಗನ್ನು ಸಂರಕ್ಷಿಸಿ ಅದರ ಮಾಲೀಕರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಭಟ್ಕಳ ಮೂಲದ ಆಸಿಫ್ ಎನ್ನುವವರು ಮಂಗಳೂರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಬ್ಯಾಗ್ ಹಾಗೂ ಮೊಬೈಲ್‌ನ್ನು ನಿಲ್ದಾಣದ ಸೀಟಿನ ಮೇಲೆಯೇ ಬಿಟ್ಟು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಸೀಟಿನಲ್ಲಿದ್ದ ಮೊಬೈಲ್ ಹಾಗೂ ಬ್ಯಾಗನ್ನು ನೊಡಿದ ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಅದನ್ನು ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಮಾದರಿಯಾಗಿದ್ದಾರೆ.
Comments are closed.