ಕರಾವಳಿ

ಬೈಕ್-ಬೊಲೆರೋ ಕಾರು ಡಿಕ್ಕಿ ; ನಾಗೂರು ನಿವಾಸಿ ಅಬ್ದುಲ್ ಹಮೀದ್ ದಾರುಣ ಸಾವು

Pinterest LinkedIn Tumblr

ಭಟ್ಕಳ/ಉತ್ತರಕನ್ನಡ: ಬೈಕ್ ಹಾಗೂ ಬುಲೇರೋ ಕಾರು ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ತಾಲೂಕಿನ ಗಡಿಭಾಗವಾಗಿರುವ ಗೊರಟೆ ರಾ.ಹೆ.66 ರಲ್ಲಿ ಜರಗಿದೆ.

ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ನಾಗೂರು ನಿವಾಸಿ ಅಬ್ದುಲ್ ಹಮೀದ್(50) ಎಂದು ಗುರುತಿಸಲಾಗಿದೆ.

Bhatkala_Accident_Case (1) Bhatkala_Accident_Case (2) Bhatkala_Accident_Case (3)

ಅಪಘಾತದಲ್ಲಿ ಮೃತ ಅಬ್ದುಲ್ ಹಮೀದ್ ಬೈಕ್ ನಲ್ಲಿ ಭಟ್ಕಳಕ್ಕೆ ಬರುತ್ತಿದ್ದಾಗ ಎದುರಿನಿಂದ ಬಂದ ಮೀನು ಸಾಗಾಟ ಮಾಡುತ್ತಿದ್ದ ಬುಲೆರೋ ಕಾರ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಮೃತರು ಗಂಗೊಳ್ಳಿ ಸಮಾಜ ಸೇವಕ ಇಬ್ರಾಹಿಂ ಗಂಗೊಳ್ಳಿಯವರ ಸಮೀಪದ ಸಂಬಂಧಿ ಎಂದು ತಿಳಿದುಬಂದಿದೆ.

Comments are closed.