ಕರಾವಳಿ

ಹರಿದ್ವಾರಕ್ಕೆ ತೆರಳುತ್ತಿದ್ದ ಪಾದಯಾತ್ರಿಗಳಿಗೆ ಉಪಹಾರ ಹಂಚಿ, ವೈದ್ಯಕೀಯ ನೆರವು ನೀಡುವ ಮೂಲಕ ಸೌಹಾರ್ಧತೆ ಮೆರೆದ ಮುಸ್ಲಿಂ ಯುವಕರು

Pinterest LinkedIn Tumblr

Helping_Muslims_1

ದೆಹಲಿ: ಹರಿದ್ವಾರಕ್ಕೆ ಶ್ರಾವಣದಲ್ಲಿ ಯಾತ್ರೆ ಹೊರಟಿರುವ ಪಾದಯಾತ್ರಿಗಳಿಗೆ ಉಪಹಾರ ಹಂಚಿ, ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿರುವ ದೆಹಲಿಯ ಮುಸ್ಲಿಂ ಯುವಕರು ಎಲ್ಲರ ಮನಸ್ಸು ಗೆದ್ದಿದ್ದಾರೆ.

ಹಿಂದೂ ಹಾಗೂ ಮುಸ್ಲಿಮರು ಇಂಥ ಉಪಹಾರ ಕೇಂದ್ರಗಳನ್ನು ಉಚಿತವಾಗಿ ತೆಗೆದು ಪಾದಯಾತ್ರಿಗಳ ಸೇವೆಗೆ ಮುಂದಾದರು. ವಿಭಿನ್ನ ಕ್ಯಾಂಪ್ ಗಳನ್ನು ರಚಿಸಿಕೊಂಡಿದ್ದರೂ, ಎಲ್ಲ ಉದ್ದೇಶ ಒಂದೇ ಆಗಿತ್ತು; ದಣಿದ ಯಾತ್ರಿಗಳಿಗೆ ನೆರವು ನೀಡುವುದು.

Helping_Muslims_2 Helping_Muslims_3

ಮುಸ್ಲಿಂ ಸಾಮಾಜಿಕ ಕಾರ್ಯಕರ್ತರ ಒಂದು ಗುಂಪು ಸೈಫಿ ಸಮಾಜ ಶಾಮ್ಲಿ ಆಯೋಜಿಸಿತ್ತು. ಇದರಲ್ಲಿ ಎಲ್ಲ ಪಾದಯಾತ್ರಿಗಳಿಗೆ ಬಾಳೆಹಣ್ಣು ಹಾಗೂ ಬಿಸ್ಕತ್ ವಿತರಿಸಲಾಯಿತು. ಮಾನವೀಯತೆಯ ವಿಚಾರ ಬಂದಾಗ ಧರ್ಮ ತಡೆಯಾಗುವುದಿಲ್ಲ ಎಂಬ ಫಲಕದೊಂದಿಗೆ ಪಾದಯಾತ್ರಿಗಳಿಗೆ ಅಗತ್ಯ ವೈದ್ಯಕೀಯ ನೆರವನ್ನೂ ನೀಡಿದರು.

ಹೆಗಲಿಗೆ ಹೆಗಲು ಕೊಡುವ “ಸಾರ್ವತ್ರಿಕ ಭ್ರಾತೃತ್ವ ಚಳವಳಿ (ಯೂನಿವರ್ಸಲ್ ಬ್ರದರ್ಹುಡ್ ಮೂವ್ಮೆಂಟ್) ಯಲ್ಲಿ ಎಲ್ಲ ಧರ್ಮಗಳ ಜನರೂ ದೊಡ್ಡ ಸಂಖ್ಯೆಯಲ್ಲಿ ಸೇರಿ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ದೆಹಲಿಯ ಕಲ್ಕಾಜಿ ದೇಗುಲದಲ್ಲಿ ಇವರು ಪಾನೀಯಗಳನ್ನು ವಿತರಿಸಿದರು.ಈ ಮೂಲಕ ಈ ಮುಸ್ಲಿಂ ಯುವಕರು ಮಾನವೀಯತೆ ವಿಚಾರ ಬಂದಾಗ ಯಾವುದೇ ಜಾತಿ, ಮತ ಭೇದ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಕೃಪೆ : ವಾಭಾ

Comments are closed.