ಉಡುಪಿ: ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಉಡುಪಿಯ ಮೂಡುಬೆಳ್ಳೆಯ ಗಣಪನಕಟ್ಟೆ ಎಂಬಲ್ಲಿ ನಡೆದಿದೆ. ಮಂಗಳವಾರ ಸಂಜೆ ಈ ಅಪಘಾತ ನಡೆದಿದ್ದು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯುವಕ ಕೊನೆಯುಸಿರೆಳೆದಿದ್ದಾರೆ.
ಮೂಡುಬೆಳ್ಳೆಯ ಜೆರಾಲ್ಡ್ ಹಾಗೂ ಮಾರ್ಗರೆಟ್ ದಂಪತಿಗಳ ಪುತ್ರ ಜಾನ್ಸನ್ ಡಿಸೋಜ(28) ಮೃತ ದುರ್ದೈವಿ ಯುವಕ.
ದುಬೈನಲ್ಲಿ ಉದ್ಯೋಗಕ್ಕಿದ್ದ ಮೂಡುಬೆಳ್ಳೆಯ ಜಾನ್ಸನ್ ಅವರು (ಜುಲೈ 31) ಮೂರು ದಿನಗಳ ಹಿಂದಷ್ಟೆ ರಜೆ ನಿಮಿತ್ತ ಊರಿಗೆ ಆಗಮಿಸಿದ್ದರು. ಮಂಗಳವಾರ ಸಂಜೆ ಕೆಲಸ ನಿಮಿತ್ತ ಪೇಟೆಗೆ ತೆರಳಿ ಪುನಃ ಮನೆಗೆ ಮರಳುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಶಿರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.