ಕರಾವಳಿ

ಉಡುಪಿ ನಗರಸಭೆಯಲ್ಲಿ ಗದ್ದಲ: ದಾರಿ ದೀಪ ಸಮಸ್ಯೆ ಬಗ್ಗೆ ಕೋಲಾಹಲ

Pinterest LinkedIn Tumblr

ಉಡುಪಿ: ದಾರಿ ದೀಪ ನಿರ್ವಹಣೆಯ ವಿಚಾರದಲ್ಲಿ ಉಡುಪಿ ನಗರಸಭೆ ವಿರೋಧ ಪಕ್ಷದ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿ, ಆಡಳಿತ-ವಿರೋಧ ಪಕ್ಷದ ಸದಸ್ಯರು ಮೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆಯಿತು.

Udupi_Nagarasabhe_Meeting (1) Udupi_Nagarasabhe_Meeting (2) Udupi_Nagarasabhe_Meeting (3) Udupi_Nagarasabhe_Meeting (4) Udupi_Nagarasabhe_Meeting (5) Udupi_Nagarasabhe_Meeting (6) Udupi_Nagarasabhe_Meeting (7) Udupi_Nagarasabhe_Meeting (8) Udupi_Nagarasabhe_Meeting (9) Udupi_Nagarasabhe_Meeting (10) Udupi_Nagarasabhe_Meeting (11)

ಕಳೆದ 4 ತಿಂಗಳಿನಿಂದ ದಾರಿ ದೀಪದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ನಾವು ಆಗ್ರಹಿಸುತ್ತಾ ಇದ್ದೇವೆ ಆದ್ರೆ ಇದುವರೆಗೆ ಕ್ರಮ ಕೈಗೊಂಡಿಲ್ಲ. ಜನಹಿತಕ್ಕೆ ಹೇಳಿ ಎಂದು ಹೇಳುತ್ತಾರೆ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿರುವ ವಿರೋಧಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ಪ್ರಶಾಂತ್ ಅಮೀನ್ ಕೂಡಾ ಸಾಥ್ ನೀಡಿ ಸದನದ ಬಾವಿಗಿಳಿದರು.ಈ ಸಂದರ್ಬದಲ್ಲಿ ಆಡಳಿತ ಪಕ್ಷದ ಸದಸ್ಯ ರಮೇಶ್ ಕಾಂಚನ್ ನೀವು ರಾಜಕೀಯ ಮಾಡುತ್ತಿದ್ದೀರಿ ಎಂದಾಗ ವಿರೋಧ ಪಕ್ಷದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಒಂದು ಹಂತಕ್ಕೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು.

ಬಳಿಕ ನಗರಸಭೆ ಪೌರಾಯುಕ್ತರು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

Comments are closed.