ಲೈಂಗಿಕ ಸಂಭೋಗಕ್ಕೆ ಹಾತೊರೆಯುವಂತೆ ಮಾಡುವ ಆಹಾರಗಳು ಅನೇಕವಿವೆ. ಆವುಗಳಲ್ಲಿ ಸುಲಭವಾಗಿ ಸಿಕ್ಕುವ ಅತ್ಯುತ್ತಮ 6 ಆಹಾರಗಳ ಪಟ್ಟಿ ಇಲ್ಲಿವೆ.
1) ಕಾಫಿ
ಕಾಫಿ ನಮ್ಮ ಲೈಂಗಿಕ ಕಾಮನೆಗಳನ್ನು ಕೆರಳಿಸುವ ಶಕ್ತಿ ಹೊಂದಿದೆ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ. ಸಂಗಾತಿ ಜೊತೆ ಸಂಭೋಗ ಮಾಡುವ ಮುನ್ನ ಒಂದು ಕಪ್ ಕಾಫಿ ಕುಡಿದು ನೋಡಿ.
2) ಕುಂಬಳಕಾಯಿ ಬೀಜ
ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಹೇರಳವಾಗಿರುವ ಜಿಂಕ್ ಅಂಶಗಳು ಹುಡುಗರ ಟೆಸ್ಟಾಸ್ಟಿರೋನ್ ಮಟ್ಟವನ್ನು ಹೆಚ್ಚಿಸುತ್ತದೆ.
3) ಚಾಕೊಲೇಟ್
ಹೆಂಗಸರ ಸೆಕ್ಸ್ ಜೀವನಕ್ಕೆ ಚಾಕೊಲೇಟ್ ಒಳ್ಳೆಯದು. ಇನಲ್ಲಿರುವ ಫೀನೈಲ್ ಈಥೈಲ್ ಅಮೈನ್ ಎಂಬ ಅಂಶದಿಂದ ಲೈಂಗಿಕ ಕಾಮನೆಗಳು ಹೆಚ್ಚಾಗುತ್ತವೆ. ಸೆಕ್ಸ್ ಮಾಡುವ ವೇಳೆ ಹೆಂಗಸರು ಹೆಚ್ಚು ಸಂತೃಪ್ತಿ ಹೊಂದಲು ಚಾಕೊಲೇಟ್ ನೆರವಾಗುತ್ತದೆ.
4) ರೆಡ್ ವೈನ್:
ಕಡುಬಣ್ಣದ ದ್ರಾಕ್ಷಿಯಿಂದ ಮಾಡಲಾದ ಈ ವೈನ್’ನಲ್ಲಿ ರಕ್ತ ಪರಿಚಲನೆ ಸುಗಮಗೊಳಿಸುವ ಅಂಶಗಳಿವೆ. ಮಹಿಳೆಯರು ಒಂದು ಅಥವಾ ಎರಡು ಗ್ಲಾಸ್ ರೆಡ್ ವೈನ್ ಕುಡಿದರೆ ಸಂಭೋಗಕ್ಕೆ ಸಂಪೂರ್ಣವಾಗಿ ಅಣಿಗೊಳ್ಳುತ್ತಾರೆ. ನೆನಪಿರಲಿ, ಎರಡು ಗ್ಲಾಸ್’ಗಿಂತ ಹೆಚ್ಚು ವೈನ್ ಕುಡಿಯಲು ಹೋಗದಿರಿ.
5) ಜಾಪತ್ರೆ(Nutmeg):
ಜಾಯಿಕಾಯಿ ಎಂದೂ ಕರೆಯುವ ಈ ನಟ್’ಮೆಗ್’ನಲ್ಲಿರುವ ಕೆಲ ಅಂಶಗಳು ನಮ್ಮ ನರವನ್ನು ಉದ್ದೀಪನಗೊಳಿಸಿ, ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಚಾಕೊಲೇಟ್ ಹಾಗೂ ಜಾಯ್’ಕಾಯಿ ಕಾಂಬಿನೇಷನ್ ಇನ್ನೂ ಅದ್ಭುತವಾಗಿ ಕೆಲಸ ಮಾಡುತ್ತದೆ.
6) ಗೆಣಸು:
ಇದು ಹೆಂಗಸರ ಸೆಕ್ಸ್ ಜೀವನದಲ್ಲಿ ಮ್ಯಾಜಿಕ್ ಮಾಡಬಲ್ಲುದು. ಗೆಣಸಿನಲ್ಲಿ ಬೀಟಾ-ಕೆರೋಟಿನ್ ಅಂಶಗಳು ಹೇರಳವಾಗಿರುತ್ತವೆ. ನಮ್ಮ ದೇಹವು ಇವುಗಳನ್ನು ವಿಟಮಿನ್ ಎ ಪೋಷಕಾಂಶಗಳಿಗೆ ಪರಿವರ್ತಿಸುತ್ತದೆ. ಈ ಮೂಲಕ ಸೆಕ್ಸ್ ಹಾರ್ಮೋನುಗಳಿಗೆ ಪುಷ್ಟಿ ಸಿಕ್ಕಂತಾಗುತ್ತದೆ.
Comments are closed.