ಉಡುಪಿ: ಉಡುಪಿ ಜಿಲ್ಲಾಧಿಕಾರಿಯಾಗಿ ಟಿ. ವೆಂಕಟೇಶ್ ಅವರನ್ನು ಸರಕಾರ ನೇಮಿಸಿದೆ.

2014ರಲ್ಲಿ ಐಎಎಸ್ ಆಗಿ ಪದೋನ್ನತಿ ಹೊಂದಿದ ಬಳಿಕ ಟಿ. ವೆಂಕಟೇಶ್ ಅವರು ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ (ಕೆಎಟಿ) ಸದಸ್ಯರಾಗಿದ್ದಾರೆ. ಇದಕ್ಕೂ ಮುನ್ನ ಅವರು ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರಾಗಿದ್ದರು. ಸಕಲೇಶಪುರ, ಚಿತ್ರದುರ್ಗ ಮೊದ ಲಾದೆಡೆ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ ವೆಂಕಟೇಶ್ ಅವರು ಮೂಲತಃ ಮೈಸೂರಿನವರು.
ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ| ವಿಶಾಲ್ ಅವರನ್ನು ಇತ್ತೀಚೆಗೆ ಸರಕಾರ ಪೌರಾಡಳಿತ ನಿರ್ದೇಶಕರಾಗಿ ನೇಮಿಸಿದ ಬಳಿಕ ಜಿ.ಪಂ. ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಪ್ರಭಾರ ಜಿಲ್ಲಾಧಿಕಾರಿಯಾಗಿದ್ದರು.
Comments are closed.