ಕಾಸರಗೋಡು, ಜು.18: ಪಯ್ಯನ್ನೂರಿನಲ್ಲಿ ಸಿಪಿಎಂ ಕಾರ್ಯಕರ್ತ ಸಿ.ವಿ.ಧನರಾಜ್‌ರನ್ನು ಕೊಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪಯ್ಯನ್ನೂರು ಸರ್ಕಲ್ ಇನ್ಸ್ಪೆಪೆಕ್ಟರ್ ವಿ. ರಮೇಶ್ ನೇತೃತ್ವದ ಪೊಲೀಸರ ತಂಡ ರವಿವಾರ ಸಂಜೆ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಕಕ್ಕಾಯಂಪಾರದ ವೈಶಾಕ್ (21), ಸುಕೇಶ್ (24), ಪ್ರಜೀತ್ ಲಾಲ್ (21) ಹಾಗೂ ಅನೂಪ್ (21) ಹೆಸರಿಸಲಾಗಿದ್ದು, ಇವರೆಲ್ಲರು ಆರೆಸ್ಸೆಸ್ ಕಾರ್ಯಕರ್ತರು ಎನ್ನಲಾಗಿದೆ.
ಜು.11ರಂದು ರಾತ್ರಿ ಪಯ್ಯನ್ನೂರು ಕುನ್ನೂರಾವಿಲ್ನ ಸಿಪಿಎಂ ಕಾರ್ಯ ಕರ್ತ ಸಿ.ವಿ.ಧನರಾಜ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಸಿ.ವಿ.ಧನರಾಜ್‌ರನ್ನು ಮಾರಕಾಸ್ತ್ರಗಳಿಂದ ಬರ್ಬರ ವಾಗಿ ಕೊಚ್ಚಿ ಹತ್ಯೆಗೈದಿತ್ತು.
ಸಿ.ವಿ.ಧನರಾಜ್‌ರ ಹತ್ಯೆ ನಡೆದು ಒಂದು ಟೆಗಳ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತ ಸಿ.ಕೆ.ರಾಮಚಂದ್ರನ್ ಎಂಬವರ ಮನೆಗೆ ನುಗ್ಗಿದ ತಂಡವೊಂದು ರಾಮಚಂದ್ರನ್ ಅವರನ್ನು ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಪೊಲೀಸರು ಬಂಧಿಸಿಲ್ಲ.
ಸಿ.ವಿ.ಧನರಾಜ್‌ರ ಕೊಲೆಗೆ ಈ ಹಿಂದೆಯೂ ಯತ್ನಿಸಲಾಗಿತ್ತು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ರಾಜಕೀಯ ದ್ವೇಷ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಇತರ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತರನ್ನು ಜು.18ರಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು ಪೊಲೀಸರು ತಲೆಮರೆಸಿಕೊಂಡಿರುವ ಶೋಧ ಕಾರ್ಯ ಮುಂದುವರಿಸಿದ್ದಾರೆ.
Comments are closed.