ಉಡುಪಿ: ಅಧಿಕಾರಿಗಳ ಮೇಲೆ ಯಾರು ದಬ್ಬಾಳಿಕೆ ಮಾಡಿದರೂ ತಪ್ಪು. ಕಾಂಗ್ರೆಸ್ ಮುಖಂಡರು ಮಾತ್ರವಲ್ಲ ಯಾರು ದಬ್ಬಾಳಿಕೆ ಮಾಡಿದರೂ ಅದನ್ನು ನಾನು ಖಂಡಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ದಬ್ಬಾಳಿಕೆ ಮಾಡುವವರಿಗೆ ತಿಳಿಸಬೇಕು. ಇಂತಹ ಪ್ರಕರಣಗಳಿಂದ ಪಕ್ಷದ ಹಾಳಾಗುತ್ತದೆ ಎಂಬುದನ್ನ ಮುಖಂಡರು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಡಾ. ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ವಿಪಕ್ಷಗಳು ಆದಾರ, ದಾಖಲೆಗಳಿದ್ದರೆ ನೀಡಲಿ ಅದನ್ನು ಬಿಟ್ಟು ರಾಜೀನಾಮೆ ನೀಡಿ ಎಂದು ಕೇಳಿದರೆ ಅದನ್ನು ನೀಡಲು ಆಗುತ್ತದಾ ಎಂದು ಜಾರ್ಜ್ ಪರ ಬ್ಯಾಟಿಂಗ್ ಮಾಡಿದರು.
ಇನ್ನು ಜನಾರ್ಧನ ಪೂಜಾರಿಗೆ ಟಾಂಗ್ ನೀಡಿದ ವೀರಪ್ಪ ಮೊಯ್ಲಿ ಸಿಎಂ ಬದಲಾವಣೆ, ಬೇರೆಯವರ ನೇಮಕದ ಅಗತ್ಯ ಇಲ್ಲ. ಪಕ್ಷದ ಆಂತರಿಕ ವಿಚಾರವನ್ನು ಆಂತರಿಕವಾಗಿ ಚರ್ಚಿಸಬೇಕೇ ಹೊರತು ಸಾರ್ವಜನಿಕವಾಗಿ ಚರ್ಚಿಸಬಾರದು ಪೂಜಾರಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರಿಗೆ ಸಲಹೆಯನ್ನು ನೀಡಿದರು.
Comments are closed.