ಕರಾವಳಿ

ಪಿ‌ಎಸೈಗೆ ಆವಾಜ್ ಹಾಕಿದ ಪ್ರಕರಣ; ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಉಡುಪಿಯಲ್ಲಿ ಶೋಭಾ ವಾಗ್ಧಾಳಿ

Pinterest LinkedIn Tumblr

ಉಡುಪಿ: ಯಾವುದೇ ಪೊಲೀಸ್ ಅಧಿಕಾರಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಲು ಸಾದ್ಯವಾದ ಪರಿಸ್ಥಿತಿಯನ್ನ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮೂರು ವರ್ಷದಲ್ಲಿ ನಿರ್ಮಾಣ ಮಾಡಿದೆ. ಗಣಪತಿ ಆತ್ಮಹತ್ಯೆ, ಡಿಸಿ ಶಿಖಾ ಹಾಕಿದ ಧಮ್ಕಿ ಹೀಗೆ ಹಲವು ಪ್ರಕರಣದ ನಂತರ ನಿನ್ನೆ ಲಕ್ಷ್ಮೀ ಹೆಬ್ಬಾಳ್ಕರ್ ಪಿ‌ಎಸ್ ಐ ಗೆ ಧಮ್ಕಿ ಹಾಕಿದ್ದು ಒಟ್ಟಿನಲ್ಲಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Shobha-Karandlaje

ಉಡುಪಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕಾರಣಿ ಸಭೆಯ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಶೋಭಾ , ಮಲ್ಲಿಕಾರ್ಜುನ ಬಂಡೆಯಿಂದ ಹಿಡಿದು ಇದುವರೆಗೆ ಅನೇಕ ಐ.ಎ.ಎಸ್, ಐಪಿ‌ಎಸ್ ಅಧಿಕಾರಿಗಳ ಅನುಮಾನಾಸ್ಪದ ಸಾವು, ಕಿರುಕುಳ, ದೌರ್ಜ್ಯನ್ಯ, ಆತ್ಮಹತ್ಯೆ ಪ್ರಕರಣಗಳು ನಡೆದು ಹೋಗಿದೆ. ಇದುವರೆಗೆ ಇದರ ತನಿಖಾ ವರದಿ ಬಹಿರಂಗವಾಗಿಲ್ಲ.

ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕಾರ್ಯ ಸಿದ್ದು ಮತ್ತು ಬೆಂಬಲಿಗರಿಂದ ಆಗುತ್ತಿದೆ. ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಪಿ.ಎಸ್.ಐ ಗೆ ಧಮ್ಕಿ ಹಾಕಿದ್ದು ಹೀಗೆ ಮಾಡಲು ಲಕ್ಷ್ಮೀ ಯಾರು ಎಂದು ಶೋಭಾ ಪ್ರಶ್ನಿಸಿದರು. ಮನೆಗೆ ಬಂದು ಭೇಟಿಯಾಗು ಎನ್ನುವ ಮೂಲಕ ಹೆಬ್ಬಾಳ್ಕರ್ ಧೀಮಾಕು ಪ್ರದರ್ಶಿಸಿದ್ದಾರೆ. ಮರಳು ಮಾಫೀಯಾ ಜೊತೆ ಶಾಮೀಲಾಗಿದ್ದಾರೆ ಎಂದೆನಿಸುತ್ತದೆ ಎಂದರು.

Comments are closed.