ಕರಾವಳಿ

ಅಕ್ರಮವಾಗಿ ಮದ್ದುಗುಂಡು ಸಾಗಿಸುತ್ತಿದ್ದ ಇಬ್ಬರ ಬಂಧನ : ಆರೋಪಿಗಳಿಂದ ಐದು ಸಜೀವ ಮದ್ದುಗುಂಡು ವಶ

Pinterest LinkedIn Tumblr

bullets_tew_areest

ಕಾಸರಗೋಡು, ಜುಲೈ .09: ನಾಡಕೋವಿಗೆ ಬಳಸುವ ಐದು ಸಜೀವ ಮದ್ದುಗುಂಡುಗಳ ಸಹಿತ ಇಬ್ಬರನ್ನು ಶುಕ್ರವಾರ ಆದ್ದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅದ್ದೂರು ನಿವಾಸಿಗಳಾದ ವಿಜಯ್ (29) ಮತ್ತು ಚೀನಾಡಿಯ ಭಾಸ್ಕರ (35) ಎಂದು ಹೆಸರಿಸಲಾಗಿದೆ.

ಸುಳ್ಯ ಕಡೆಯಿಂದ ಅಡೂರಿಗೆ ಬರುತ್ತಿದ್ದ ಸ್ಕೂಟರ್‌ನಲ್ಲಿ ಮದ್ದುಗುಂಡುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹನಗಳ ತಪಾಷಣೆ ನಡೆಸಿದಾಗ ಸುಳ್ಯ ಕಡೆಯಿಂದ ಅಡೂರಿಗೆ ಬರುತ್ತಿದ್ದ ಸ್ಕೂಟರನ್ನು ತಡೆದು ನಿಲ್ಲಿಸಿ ಶೋಧಿಸಿದಾಗ ಮದ್ದುಗುಂಡುಗಳು ಪತ್ತೆಯಾಗಿದೆ. ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ವಿಜಯ್ ಧರಿಸಿದ್ದ ವಸ್ತ್ರದಲ್ಲಿ ಮದ್ದುಗುಂಡುಗಳನ್ನು ಬಚ್ಚಿಡಲಾಗಿತ್ತು. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಈ ಪ್ರದೇಶದಲ್ಲಿ ನಕಲಿ ಬಂದೂಕು ತಯಾರಿಸುವ ಜಾಲವೇ ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕರ್ನಾಟಕದಿಂದ ಇದಕ್ಕೆ ಬೇಕಾದ ಪರಿಕರಗಳನ್ನು ಪೂರೈಕೆ ಮಾಡಲಾಗುತ್ತಿದ್ದು,ಈ ಜಾಲದ ಪತ್ತೆಗೆ ಪೊಲೀಸರ ಪ್ರಯತ್ನ ಮುಂದುವರಿದಿದೆ.

Comments are closed.