*ಯೋಗೀಶ್ ಕುಂಭಾಸಿ
ಕುಂದಾಪುರ: ಕೋವಿಯ ಗುಂಡು ಹಾರಿಸಿಕೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಡ್ಕಲ್ ಗ್ರಾಮಪಂಚಾಯತಿನ ಬೀಸಿನಪಾರೆ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಶನಿವಾರ ಬೆಳಿಗ್ಗೆ ರಿಕ್ಷಾ ಚಾಲಕರೋರ್ವರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೀಸಿನಪಾರೆ ನಿವಾಸಿ ಜೆರೀಷ್ ಜೋಸೆಫ್(34) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶನಿವಾರ ಬೆಳಿಗ್ಗೆ ಶವ ಸಿಕ್ಕ ತರುವಾಯ ಇದೋಂದು ಕೊಲೆಯೆಂದು ಊಹಾಪೋಹಗಳು ಸೃಷ್ಟಿಯಾಯಿತಾದರೂ ಕೂಡ ಮೃತರ ಜೇಬಿನಲ್ಲಿ ಸಿಕ್ಕ ಡೆತ್ನೋಟ್ ಮೂಲಕ ಇದೊಂದು ಆತ್ಮಹತ್ಯೆಯೆಂದು ತಿಳಿದುಬಂದಿದೆ.










ಘಟನೆ ವಿವರ:
ಮನೆಯಲ್ಲಿ ತಂದೆ-ತಾಯಿ ಜೊತೆಗೆ ಕ್ರಷಿಕಾರ್ಯವನ್ನು ನೋಡಿಕೊಂಡಿದ್ದ ಜೆರೀಷ್ ಅವರು ಅವಿವಾಹಿತರಾಗಿದ್ದರು. ಸರಳ ಸ್ವಭಾವದ ಜೆರೀಷ್ ಅವರು ಯಾರೊಂದಿಗೂ ದ್ವೇಷ ಕಟ್ಟಿಕೊಂಡಿರಲಿಲ್ಲ. ಬೀಸಿನಪಾರೆ ರಸ್ತೆ ಸಮೀಪದ ಜಾಗವೊಂದರಲ್ಲಿದ್ದ ತಳಪಾಯದ ಮೇಲೆ ಬಂದೂಕನ್ನು ಕೈಯಲ್ಲಿ ಹಿಡಿದ ಸ್ಥಿತಿಯಲ್ಲಿ ಶನಿವಾರ ಶವ ಪತ್ತೆಯಾಗಿದೆ. ಶವವನ್ನು ಕಂಡರೇ ಸ್ವತಃ ತಾನೇ ಬಂದೂಕಿನಲ್ಲಿ ಬಾಯಿಗೆ ಗುರಿಯಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದ್ದು ಮಧ್ಯಾಹ್ನದ ಸುಮಾರಿಗೆ ಆಗಮಿಸಿದ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ತಜ್ಞ ವೈದ್ಯರ ತಂಡ ಪರಿಶೀಲನೆ ನಡೆಸುವಾಗ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು.
15 ವರ್ಷದ ಹಿಂದಿನ ತಪ್ಪೇನು..?
“ನನ್ನ ಸಾವಿಗೆ ನಾನೇ ಕಾರಣ. 15 ವರ್ಷದ ಹಿಂದೆ ಆದ ತಪ್ಪು. ನನ್ನನ್ನು ಕ್ಷಮಿಸಿ. ಯಾರು ಬೇಸರ ಮಾಡುವುದು ಬೇಡ. ದೇವರೇ ನನ್ನನ್ನು ಕ್ಷಮಿಸಿ. ನಾನು ಮಾಡಿದ ಪಾಪಕ್ಕೆ ಮರಣವೇ ನನ್ನ ಶಿಕ್ಷೆ. ಯಾರಿಗೂ ನನ್ನ ತಡೆಯೋಕೆ ಆಗಲ್ಲ. ನನ್ನ ವಿಧಿ. ಯಾರಿಗೂ ನಾನು ಬೇಸರ ಮಾಡಲು ಇಷ್ಟ ಇಲ್ಲ. ನನ್ನನ್ನು ಕ್ಷಮಿಸಿ- ಜೆರೀಷ್.
ಇದು ಆತ್ಮಹತ್ಯೆಗೂ ಮುಂಚೆ ಜೇರಿಷ್ ಬರೆದ ಡೆತ್ನೋಟ್. ಕೋವಿಯಲ್ಲಿ ಗುಂಡು ಹಾರಿಸಿಕೊಳ್ಳುವ ಮೊದಲು ತನ್ನ ಜೇಬಿನಲ್ಲಿ ಈ ಪತ್ರವನ್ನಿಟ್ಟುಕೊಂಡಿದ್ದು ಶವದ ಪರಿಶೀಲನೆ ವೇಳೆ ಲಭಿಸಿದೆ. ಆದರೇ ಹದಿನೈದು ವರ್ಷದ ಹಿಂದಿನ ತಪ್ಪೇನು ಎಂಬುದು ಮಾತ್ರ ಇನ್ನೂ ನಿಗೂಢವೇ ಆಗಿದೆ.
ಮದುವೆ ಫಿಕ್ಸ್ ಆಗಿತ್ತು…
ಅವಿವಾಹಿತರಾದ ಜೆರೀಷ್ ಅವರಿಗೆ ಮುಂದಿನ ತಿಂಗಳು ಆಗಸ್ಟ್ 29ರಂದು ಮದುವೆ ನಡೆಯುವುದರಲ್ಲಿದ್ದು ಮದುವೆ ಫಿಕ್ಸ್ ಆಗಿತ್ತು.
ಘಟನಾ ಸ್ಥಳಕ್ಕೆ ವಿಧಿವಿಜ್ನಾನ ಪ್ರಯೋಗಾಲಯದ ತಜ್ಞರು, ಉಡಪಿ ಜಿಲ್ಲಾ ಪೊಲೀಸ್ ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತನಿರೀಕ್ಷಕ ಸುದರ್ಶನ್,ಕೊಲ್ಲೂರು ಹಾಗೂ ಬೈಂದೂರು ಠಾಣೆ ಉಪನಿರೀಕ್ಷಕರು ಹಅಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Comments are closed.