ಅಂತರಾಷ್ಟ್ರೀಯ

50 ಸಾವಿರದ ಗಡಿ ಸಮೀಪಿಸಿದ ಬೆಳ್ಳಿ

Pinterest LinkedIn Tumblr

SILVER

ನವದೆಹಲಿ: ಬ್ರಿಟನ್-ಐರೋಪ್ಯ ಒಕ್ಕೂಟದಿಂದ ಹೊರಬರುವ ಪರ ಮತ ಚಲಾವಣೆಯಾದ ಬಳಿಕ ವಿಶ್ವದಾದ್ಯಂತ ಅದರ ಪ್ರಭಾವ ಗೋಚರಿಸುತ್ತಿದ್ದು, ಭಾರತದ ಚಿನಿವಾರಪೇಟೆ ಮತ್ತು ಷೇರುಪೇಟೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

ಚಿನ್ನದ ದರದಲ್ಲಿ ಭಾರೀ ಏರುಪೇರಾಗಿದೆ. ಚಿನ್ನಾಭರಣ ವರ್ತಕರ ಬಂಗಾರದ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರ ಕುಸಿತ ಕಂಡಿದೆ. ವಿದೇಶಗಳಲ್ಲಿ ಚಿನ್ನದ ಬೇಡಿಕೆ ಇದ್ದರೂ ಮಾರುಕಟ್ಟೆಯಲ್ಲಿ ದರ 150 ರೂ.ನಷ್ಟು ಕುಸಿತ ಕಂಡಿದೆ. ಇದೇ ವೇಳೆ ಬೆಳ್ಳಿಯ ದರ ಗಣನೀಯವಾಗಿ ಏರುತ್ತಿದೆ.

ಕಳೆದ ವಾರ 42-43 ಸಾವಿರ ರೂ. ಇದ್ದ ಬೆಳ್ಳಿ ಧಾರಣೆ ಹೆಚ್ಚು 50 ಸಾವಿರದ ಗಡಿ ಸಮೀಪಿಸಿದೆ. ಇದೇ ರೀತಿ ಬ್ರೆಕ್ಸಿಟ್ ವಿಶ್ವದಾದ್ಯಂತ ತನ್ನ ಪ್ರಭಾವ ಬೀರಿದೆ.

Comments are closed.