ಅಂತರಾಷ್ಟ್ರೀಯ

ನಿಮ್ಮ ಯೌವನ ಶಕ್ತಿ ಹೆಚ್ಚಾಗ ಬೇಕೇ….ಈ ಪದಾರ್ಥಗಳನ್ನು ಸೇವಿಸಿ….

Pinterest LinkedIn Tumblr

co

ಪ್ರತಿಯೊಬ್ಬರು ಉತ್ತಮ ಆರೋಗ್ಯದ ಜೊತೆ ಧೀರ್ಘ ಕಾಲದ ಯೌವನವನ್ನು ಬಯಸುತ್ತಾರೆ. ಹೆಚ್ಚು ಯೌವನ ಭರಿಸುವ ಅದನ್ನು ಧೀರ್ಘಕಾಲ ಉಳಿಸುವ ಆಹಾರ ಪದಾರ್ಥಗಳನ್ನು ವಿಜ್ಞಾನಿಗಳ ತಂಡ ಸಂಶೋಧಿಸಿದೆ.

ಹೆಚ್ಚು ಪೌಷ್ಟಿಕಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ನಿಮ್ಮ ಯೌವನವು ಹೆಚ್ಚಾಗುತ್ತದೆ. ಅದು ಸಸ್ಯಾಹಾರವಿರಬಹುದು ಅಥವಾ ಮಾಂಸಾಹಾರವಿರಬಹುದು. ಆದರೆ ಇವೆರಡು ಪದಾರ್ಥಗಳಲ್ಲಿ ಪೌಷ್ಟಿಕಾಂಶ ಹೆಚ್ಚಿರಬೇಕು.

ಸೊಪ್ಪು, ತರಕಾರಿ, ಹಣ್ಣುಗಳು, ಸುಟ್ಟ ಕೋಳಿ ಮಾಂಸ, ಮೊಟ್ಟೆ ಇವುಗಳಲ್ಲಿ ಸಾಮಾನ್ಯವಾಗಿ ಪೌಷ್ಟಿಕ ಪದಾರ್ಥಗಳು ಹೆಚ್ಚಿರುತ್ತವೆ. ಸೊಪ್ಪು, ಹಣ್ಣು ಹಾಗೂ ತರಕಾರಿಗಳನ್ನು ಹಸಿಯಾಗಿ ಸೇವಿಸಿದರೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಅಲ್ಲದೆ ಯೌವನದ ಶಕ್ತಿ ಕೂಡ ಹೆಚ್ಚಾಗುತ್ತದೆ.

ಕೊಲಾಸ್ಟ್ರಾಲ್ ರಹಿತ ಸುಟ್ಟ ಮಾಂಸ ಪದಾರ್ಥಗಳನ್ನು ಸೇವಿಸಿದರೆ ಹದಿಹರಯತನ ವೃದ್ಧಿಸುತ್ತದೆ. ಪೌಷ್ಟಿಕಾಂಶ ಹೆಚ್ಚಿರುವ ಪದಾರ್ಥಗಳು ನಿಮ್ಮ ದೇಹದಲ್ಲಿನ ಯೌವನವನ್ನು ಕ್ಷೀಣಿಸುವ ದೇಹದ ಕಣಗಳನ್ನು ನಿಧಾನಗತಿಯಲ್ಲಿ ಕ್ಷೀಣಿಸುತ್ತದೆ.

ಮಿಷಿಗನ್ ವಿವಿ ಸಂಶೋಧಕರಿಂದ ಸಂಶೋಧನೆ
ಬೇಗ ಮುಪ್ಪಾಗುವವರಿಗೆ ನರ ಅವನತಿಯ ರೋಗ ಆವರಿಸುತ್ತದೆ. ಪೌಷ್ಟಿಕ ಪದಾರ್ಥಗಳು ಈ ರೋಗದ ರೋಗಾಣುಗಳನ್ನು ಕೊಲ್ಲುತ್ತವೆ ಎಂದು ಅಮೆರಿಕಾದ ಮಿಷಿಗನ್ ವಿವಿ ಸಂಶೋಧಕರು ಪರಿಶೋಧಿಸಿದ್ದಾರೆ. ಪೌಷ್ಟಿಕಾಂಶ ಹೆಚ್ಚು ಹಾಗೂ ಕಡಿಮೆ ಸೇವಿಸುವ ಜನರನ್ನು ವಿವಿಧ ಕಡೆಯಿಂದ ಕೆಲವು ವರ್ಷಗಳ ಕಾಲ ಸಂಶೋಧನೆ ನಡೆಸಿದಾಗ. ಪೌಷ್ಟಿಕ ಪದಾರ್ಥಗಳನ್ನು ಸೇವಿಸುವವರಿಗೆ ಯೌವನಶಕ್ತಿ ಹೆಚ್ಚಾಗಿ ದೇಹದಲ್ಲಿ ಮುಪ್ಪಿನತನ ಕಡಿಮೆಯಾಗಿದೆ.

Comments are closed.