
ಮಂಗಳೂರು,ಜೂನ್.19: ಕೊಲೆಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಜೈಲಿಗಟ್ಟಲಾಗಿದೆ.
ಮಂಗಳೂರು ತಾಲೂಕಿನ ಪಡು ಮಾರ್ನಾಡು ಗ್ರಾಮದ ನಿವಾಸಿ ಕಿರಣ ಶೆಟ್ಟಿ @ ಬಾಂಬೆ ಕಿರಣ @ ಕಿರಣ (27 ), ಈತನ ವಿರುದ್ದ ಎರಡು ಕೊಲೆಗೆ ಯತ್ನ ಪ್ರಕರಣ, ಒಂದು ದರೋಡೆಗೆ ಯತ್ನ ಪ್ರಕರಣ ಮತ್ತು ಒಂದು ಬಲಾದ್ಗ್ರಹಣ ಪ್ರಕರಣ ಹೀಗೆ ಒಟ್ಟು ನಾಲ್ಕು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.
ಮಂಗಳೂರು ತಾಲೂಕಿನ ತೋಡಾರು ಗ್ರಾಮದ ನಿವಾಸಿ ಮೊಹಮ್ಮದ್ ಶರೀಪ್ (45 ), ಈತನ ವಿರುದ್ದ ಒಂದು ಕೊಲೆ ಪ್ರಕರಣ ಮತ್ತು ಮೂರು ಕೊಲೆಯತ್ನ ಪ್ರಕರಣ ಹೀಗೆ ಒಟ್ಟು ನಾಲ್ಕು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಜೈಲಿಗೆ ಕಾರಾಗೃಹದಲ್ಲಿರಿಸಲಾಗಿದೆ.
ಪೊಲೀಸ್ ನಿರೀಕ್ಷಕರು ಮೂಡಬಿದ್ರೆ ಪೊಲೀಸ್ ಠಾಣೆ, ಸಹಾಯಕ ಪೊಲೀಸ್ ಆಯುಕ್ತರು ಉತ್ತರ ಉಪ ವಿಭಾಗ ಮತ್ತು ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ ಇವರುಗಳ ವರದಿಯ ಆಧಾರದ ಮೇರೆಗೆ ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ ಆಜ್ಞೆಯನ್ನು ಹೊರಡಿಸಿರುತ್ತಾರೆ.
Comments are closed.