ಉಡುಪಿ: ಇದು ಹೆದ್ದಾರಿಯಲ್ಲ.. ಮರಣಕ್ಕೆ ದಾರಿ.. ಹೌದು ಉಡುಪಿಯ ಕರಾವಳಿಯ ಬೈಪಾಸ್ ಹೆದ್ದಾರಿ ಇದೇ ಪರಿಸ್ಥಿತಿಯಲ್ಲಿದೆ.

ಹೆದ್ದಾರಿಯಲ್ಲಿ ನೀರು ತುಂಬಿದೆ. ಮೇಲ್ನೋಟಕ್ಕೆ ಇದು ಉತ್ತಮ ರಸ್ತೆ ಅಂತ ಅನಿಸಬಹುದು. ಇದೇ ಆಲೋಚನೆಯಿಂದ ನೀವೇನಾದ್ರು ಸ್ಪೀಡ್ ಹೋದ್ರೆ ಹೊಂಡಕ್ಕೆ ಬೀಳೋದು ಗ್ಯಾರಂಟಿ. ಅಷ್ಟೇಅಲ್ಲ. ಸೊಂಟ ಮುರಿದುಕೊಂಡು ಆಸ್ಪತ್ರೆಗೂ ಹೋಗಬೇಕಾದ ಪರಿಸ್ಥಿತಿ ಬರಹಬುದು. ಹೌದು ಇದು ಕರಾವಳಿ ಬೈಪಾಸ್ ಹೆದ್ದಾರಿಯ ಅವ್ಯವಸ್ಥೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹೆದ್ದಾರಿ ತುಂಬಾ ನೀರು ನಿಂತುಕೊಂಡಿದೆ. ಅಷ್ಟೇ ಅಲ್ಲ ಇಲ್ಲಿದ್ದ ಸಣ್ಣ ಪ್ರಮಾಣದ ಗುಂಡಿಯೊಂದು ದೊಡ್ಡದಾಗಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಅಂದಹಾಗೆ ಕರಾವಳಿ ಬೈಪಾಸ್ ನಲ್ಲಿ ಫೈ ಓವರ್ ಕಾಮಗಾರಿ ಪ್ರಗತಿಯಲ್ಲಿದ್ದು ಈ ಹಿನ್ನಲೆಯಲ್ಲಿ ಹೆದ್ದಾರಿಯ ಈ ರಸ್ತೆ ಅವ್ಯವಸ್ಥೆಗೆ ಕಾರಣವಾಗಿದೆ. ಸದಾ ಟ್ರಾಫಿಕ್ ನಿಂದ ಕೂಡಿದ ಈ ರಸ್ತೆಯಲ್ಲಿ ಇಂದು ಮಾತ್ರ ಟ್ರಾಫಿ ಜಾಮ್ ನಿರತರವಾಗಿತ್ತು. ಯಾಕೆಂದರೆ ಈ ಹೊಂಡದಲ್ಲಿ ಸಿಲುಕಿಕೊಂಡ ವಾಹನಗಳು ಮೇಲೇರಲು ಹರಸಾಹಸ ಪಡುತ್ತಿದ್ದವು. ಸ್ಥಳೀಯ ರಿಕ್ಷಾ ಚಾಲಕರು, ಸ್ಥಳೀಯರ ನೆರವಿನಿಂದ ಹಲವು ವಾಹನಗಳನ್ನು ಮೇಲಕ್ಕೆತ್ತಿ ಮುಕ್ತಿ ಹೊಂದದಿಂದ ನೀಡಲಾಯಿತು.
ಇನ್ನು ಟ್ರಾಪಿಕ್ ಕೆಲಸ ಮಾಡಬೇಕಾದ ಪೊಲೀಸರು ಬರೇ ಹೊಂಡದ ಬಗ್ಗೆ ವಾಹನ ಸವಾರರಿ ಸೂಚನೆ ನೀಡುವ ಕೆಲಸವೇ ಮಾಡುವಂತಾಯಿತು. ಅಲ್ಲದೇ ಇದೀಗ ಕರವಾಳಿಯಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ .. ಒಟ್ಟಿನಲ್ಲಿ ಕರಾವಳಿ ಬೈಪಾಸ್ ಇದೀಗ ಅವ್ಯವಸ್ಥೆಯ ಆಗರವಾಗಿದ್ದು ಸಂಬಂಧಪಟ್ಟ ಹೆದ್ದಾರಿ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
Comments are closed.