
ಗಂಡ ಹೆಂಡತಿ ಬೆಡ್‌ರೂಮಲ್ಲಿ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಕೇಳಿದ್ರೆ.. ಏನ್ರೀ ಇಂಥದ್ದೆಲ್ಲಾ ಮಾತಾಡ್ತೀರಾ..? ಹೀಗೆಲ್ಲ ಕೇಳ್ತಾರಾ ಅನ್ನೋ ಮರು ಪ್ರಶ್ನೆ ತೂರಿಬರಬಹುದು. ಇನ್ನು ಕೆಲವರು ಸುಲಭವಾಗಿ ಮಿಲನ ಮಹೋತ್ಸವ ಅನ್ನಬಹುದು. ಆದರೆ ನಿಜಕ್ಕೂ ವಿಷ್ಯಾನೇ ಬೇರೆ. ಗಂಡ ಹೆಂಡತಿ ಬೆಡ್ ರೂಮ್‌ನಲ್ಲಿದ್ದರೆ, ಹೆಚ್ಚಾಗಿ ಹಣದ ಬಗ್ಗೆಯೇ ಚಿಂತೆ ಮಾಡ್ತಾರೆ ಅಂತ ಸಮೀಕ್ಷೆಯೊಂದು ಹೇಳಿದೆ.
ಸಮೀಕ್ಷೆಗಾಗಿ 15 ಸಾವಿರ ಮಂದಿಯನ್ನು ಸಂಪರ್ಕಿಸಲಾಗಿದೆ. ಸಮೀಕ್ಷೆ ಪ್ರಕಾರ, 10ರಲ್ಲಿ 7 ಬಾರಿ ಗಂಡ ಹೆಂಡತಿ ಸಂಬಳ ವಿಚಾರವನ್ನು ಮಾತನಾಡಿದ್ದಾರಂತೆ. ಮತ್ತೆ ಕೆಲವರು ಬ್ಯಾಂಕ್ ಅಕೌಂಟ್ ವಿಚಾರ ಮಾತನಾಡಿದ್ದಾರಂತೆ. ಲಂಡನ್ ವಿಶ್ವವಿದ್ಯಾಲಯ ಸೆಕ್ಸ್ ಕುರಿತಾಗಿ ಈ ಸಮೀಕ್ಷೆ ನಡೆಸಿದ್ದು, 16ರಿಂದ 74 ವರ್ಷದ ವಯಸ್ಸಿನ ಪುರುಷ-ಮಹಿಳೆಯರನ್ನು ಸಂದರ್ಶಿಸಿದೆ. ಸಮೀಕ್ಷೆಗೊಳಪಟ್ಟವರಲ್ಲಿ ಸೆಕ್ಸ್ ವಿಚಾರಕ್ಕಿಂತ ಇತರ ಕೌಟುಂಬಿಕ, ಇತರೆ ವಿಚಾರಗಳು ಬೆಡ್‌ರೂಂನಲ್ಲಿ ಹೆಚ್ಚು ಚರ್ಚೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಬೆಡ್‌ರೂಂ ಮಾತುಕತೆ ನಮಗೆ ಖುಷಿ ಅಂತ ಹೆಚ್ಚಿನವರು ಹೇಳಿದ್ದಾರೆ.
ಅಚ್ಚರಿ ಎಂದರೆ, ಇನ್ನು ಕೆಲವರು ತಮಗೆ ಬೇರೆ ಸಂಬಂಧ ಇರುವುದು ಸಂಗಾತಿಗೆ ಗೊತ್ತಾಗೋದು ಬೇಡ ಎನ್ನುವುದಕ್ಕಾಗಿಯೇ, ಸುಖಾ ಸುಮ್ಮನೆ ಸಂಬಳ, ಬ್ಯಾಂಕ್ ಬ್ಯಾಲೆನ್ಸ್ ಇತ್ಯಾದಿಗಳ ಬಗ್ಗೆ ಮಾತಾಡ್ತೇವೆ ಎಂದು ಹೇಳಿದ್ದಾರಂತೆ!
ಬೆಡ್‌ರೂಮಲ್ಲಿ ದಂಪತಿ ಸಂಬಳ, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಮಾತೋಡೋದೆ ಹೆಚ್ಚು!
10ರಲ್ಲಿ 7 ಬಾರಿ ಸಂಬಳದ ಬಗ್ಗೆಯೇ ಬ್ರಿಟನ್ನಿಗರಿಗೆ ಚಿಂತೆ
ಸೆಕ್ಸ್‌ಗಿಂತ ಕೌಟುಂಬಿಕ, ಇತರ ವಿಚಾರಗಳೇ ಹೆಚ್ಚು ಪ್ರಸ್ತಾಪ!
ಇನ್ನು ಕೆಲವರು ತಮ್ಮ ಅಕ್ರಮ ಸಂಬಂಧ ಸಂಗಾತಿಗೆ ಗೊತ್ತಾಗೋದು ಬೇಡ ಅನ್ನೋದಕ್ಕೆ ಸಂಬಳ, ಹಣದ ವಿಚಾರ ಪ್ರಸ್ತಾಪ ಮಾಡ್ತಾರೆ!
Comments are closed.