
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದ ಬೆನ್ನಲ್ಲೇ ಭಾನುವಾರ ಸಂಜೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಾಳೆ ಸಂಜೆ ರಾಜಭವನದಲ್ಲಿ 13 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ನಾಳೆ ಸಂಜೆ 4 ಗಂಟೆ ಸುಮಾರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ 13 ಮಂದಿ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸಚಿವ ಸಂಪುಟ ಪುನರ್ ರಚನೆ ವೇಳೆ ಸಂಪುಟದಿಂದ ಕೈಬಿಡಲಿರುವ ಹಾಗೂ ಸೇರ್ಪಡೆ ಆಗಲಿರುವವರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧಪಡಿಸಿರುವ ಪಟ್ಟಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಸೋನಿಯಾ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಸಿದ್ಧರಾಮಯ್ಯ ಅವರು ಸೋನಿಯಾ ಅವರ ಜತೆ ಸುಮಾರು ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿ ಸಂಪುಟ ಪುನರ್‍ರಚನೆ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ.
ಸಭೆಯಲ್ಲಿ ಕೈಗೊಂಡ ತೀರ್ಮಾನಗಳೇನು?
*14 ಹಾಲಿ ಸಚಿವರನ್ನು ಕೈ ಬಿಡಲು ಸಮ್ಮತಿ ಸೂಚಿಸಿದ ಸೋನಿಯಾ ಗಾಂಧಿ
*ಹೊಸಬರಿಗೆ ಸಚಿವ ಸ್ಥಾನ ನೀಡಲು ತೀರ್ಮಾನ
*ಇಂದು ಸಂಜೆಯೇ ನೂತನ ಸಚಿವರ ಪಟ್ಟಿ ರಾಜ್ಯಪಾಲರಿಗೆ ಸಲ್ಲಿಕೆ
*ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ
ಕೈ ಬಿಟ್ಟಿದ್ದು ಯಾರನ್ನು?
ಅಂಬರೀಶ್
ಕಿಮ್ಮನೆ ರತ್ನಾಕರ್
ಸತೀಶ್ ಜಾರಕಿಹೊಳಿ
ಬಾಬುರಾವ್ ಚಿಂಚನಸೂರ್
ದಿನೇಶ್ ಗುಂಡೂರಾವ್
ಪಿಟಿ ಪರಮೇಶ್ವರ್ ನಾಯಕ್
ಶ್ಯಾಮನೂರ್ ಶಿವಶಂಕರಪ್ಪ
ಖಮರುಲ್ ಇಸ್ಲಾಂ
ವಿನಯ್ ಕುಮಾರ್ ಸೊರಕೆ
ವಿ.ಶ್ರೀನಿವಾಸ್ ಪ್ರಸಾದ್
ಶಿವರಾಜ್ ತಂಗಡಗಿ
ಅಭಯ್ ಚಂದ್ರ ಜೈನ್
ಎಸ್ ಆರ್ ಪಾಟೀಲ್
ಹೊಸ ಸಚಿವರು ಯಾರು?
ಪ್ರಿಯಾಂಕ ಖರ್ಗೆ – ಚಿತ್ತಾಪುರ ವಿಧಾನಸಭಾ ಕ್ಷೇತ್ರ
ಸಂತೋಷ್ ಲಾಡ್ – ಕಲಘಟಗಿ ವಿಧಾನಸಭಾ ಕ್ಷೇತ್ರ
ರುದ್ರಪ್ಪ ಲಮಾಣಿ -ಹಾವೇರಿ ವಿಧಾನಸಭಾ ಕ್ಷೇತ್ರ
ಎಂ ಕೃಷ್ಣಪ್ಪ -ವಿಜಯನಗರ ವಿಧಾನಸಭಾ ಕ್ಷೇತ್ರ
ಪ್ರಮೋದ್ ಮಧ್ವರಾಜ್ -ಉಡುಪಿ ವಿಧಾನಸಭಾ ಕ್ಷೇತ್ರ
ತನ್ವೀರ್ ಸೇಠ್ -ನರಸಿಂಹರಾಜ ವಿಧಾನಸಭಾ ಕ್ಷೇತ್ರ
ಕಾಗೋಡು ತಿಮ್ಮಪ್ಪ – ಸಾಗರ ವಿಧಾನಸಭಾ ಕ್ಷೇತ್ರ
ರಮೇಶ್ ಕುಮಾರ್ -ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ
ರಮೇಶ್ ಜಾರಕಿಹೊಳಿ -ಗೋಕಾಕ್ ವಿಧಾನಸಭಾ ಕ್ಷೇತ್ರ
ಬಸವರಾಜ್ ರಾಯರೆಡ್ಡಿ -ಕೊಪ್ಪಳ ವಿಧಾನಸಭಾ ಕ್ಷೇತ್ರ
ಹೆಚ್. ವೈ ಮೇಟಿ- ಬಾಗಲಕೋಟೆ ವಿಧಾನಸಭಾ ಕ್ಷೇತ್ರ
ಗೋಪಾಲಕೃಷ್ಣ -ಬಳ್ಳಾರಿ ಶಾಸಕ
Comments are closed.